ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆ ಐದನೇ ಸ್ಥಾನಕ್ಕೆ ಏರಿದೆ.
2023ನೇ ಸಾಲಿನಲ್ಲಿ ಜಿಲ್ಲೆಯು 12ನೇ ಸ್ಥಾನ ಗಳಿಸಿತ್ತು. ಒಟ್ಟು ಶೇ 86.54 ಫಲಿತಾಂಶ ಸಾಧನೆಯೊಂದಿಗೆ ಏಳು ಸ್ಥಾನ ಮೇಲಕ್ಕೇರಿದೆ.
ಪರೀಕ್ಷೆಗೆ ಕುಳಿತಿದ್ದ 9,842 ವಿದ್ಯಾರ್ಥಿಗಳ ಪೈಕಿ 8,517 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
'ಫಲಿತಾಂಶ ಸುಧಾರಣೆಗೆ ನಿರಂತರ ಪ್ರಯತ್ನ ನಡೆದಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗಿತ್ತು' ಎಂದು ಡಿಡಿಪಿಐ ಲತಾ ನಾಯಕ ಪ್ರತಿಕ್ರಿಯಿಸಿದ್ದಾರೆ.