ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ಸರ್ಕಾರಿ ಜಾಗ ಭೂಗಳ್ಳರಿಗೆ

ಕಂದಾಯ ಇಲಾಖೆ ನುಸುಳುಕೋರರಿಗೆ ಕಾಯ್ದೆಗಳು ಲೆಕ್ಕಕ್ಕಿಲ್ಲ
Published : 27 ಏಪ್ರಿಲ್ 2024, 20:54 IST
Last Updated : 27 ಏಪ್ರಿಲ್ 2024, 20:54 IST
ಫಾಲೋ ಮಾಡಿ
Comments
ಅರಣ್ಯ ಒತ್ತುವರಿ: ರಾಜ್ಯಕ್ಕೆ ಎರಡನೇ ಸ್ಥಾನದ ಅಪಖ್ಯಾತಿ
ಕರ್ನಾಟಕದಲ್ಲಿ 76,196 ಹೆಕ್ಟೇರ್ ಅರಣ್ಯ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಿಳಿಸಿತ್ತು. ಇತ್ತೀಚೆಗೆ ಲೋಕಸಭೆಗೆ ಲಿಖಿತ ಉತ್ತರ ನೀಡುವಾಗ ಅಸ್ಸಾಂ ಬಿಟ್ಟರೆ ಹೆಚ್ಚು ಅರಣ್ಯ ಒತ್ತುವರಿಯಾಗಿರುವುದು ಕರ್ನಾಟಕದಲ್ಲೇ ಎಂದು ವಿವರಿಸಿತ್ತು. ಕರ್ನಾಟಕದಲ್ಲಿ ಅರಣ್ಯ ಅತಿಕ್ರಮಣ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ‘ಸರ್ವೆ ಕಾರ್ಯ ಕೈಗೊಂಡ ಬಳಿಕ ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಬೇಕು. ಅತಿಕ್ರಮಣದಿಂದ ಅರಣ್ಯಕ್ಕೆ ಹಾನಿಯಾಗಿದ್ದರೆ ಯಾವುದೇ ವಿಳಂಬವಿಲ್ಲದೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿತ್ತು.
ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ: ಕಟಾರಿಯ
‘ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಚಾರ್ಜ್‌ಶೀಟ್ ಸಲ್ಲಿಸಲು ಕಂದಾಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ‘‍ಪ್ರಜಾವಾಣಿ’ಗೆ ತಿಳಿಸಿದರು. ‘ತರೀಕೆರೆಯಲ್ಲಿ ಅಕ್ರಮ ಆಗಿರುವ ಮಾಹಿತಿ ಬಂದ ಕೂಡಲೇ ತನಿಖೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೋಲಾರದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗಿದ್ದು, ವರದಿ ಈಗಷ್ಟೇ ಬಂದಿದೆ. ಬೇರೆ ಜಿಲ್ಲೆಗಳಲ್ಲೂ ಅಕ್ರಮ ಆಗಿರುವ ಮಾಹಿತಿ ಬಂದರೆ, ಮಾಧ್ಯಮಗಳಲ್ಲಿ ವರದಿಯಾದರೆ ತನಿಖೆ ನಡೆಸುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಸಹಿಸುವ ಪ್ರಶ್ನೆ ಇಲ್ಲ’ ಎಂದರು.
10.49 ಲಕ್ಷ ಅರ್ಜಿ ವಿಲೇವಾರಿಗೆ ಬಾಕಿ
ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕೃಷಿ ಉದ್ದೇಶಕ್ಕೆ ಭೂಮಿ ಮಂಜೂರು ಮಾಡಿ ಸಕ್ರಮಗೊಳಿಸುವ ಪ್ರಕ್ರಿಯೆ ರಾಜ್ಯದಲ್ಲಿ ಮೂರು ಬಾರಿ ನಡೆದಿದೆ. ಭೂಕಂದಾಯ ಕಾಯ್ದೆ 1964ರ ಕಲಂ 94(ಎ)ಗೆ 1991ರಲ್ಲಿ ತಿದ್ದುಪಡಿ ಮಾಡಿ ಮೊದಲ ಬಾರಿಗೆ ಗರಿಷ್ಠ 5 ಎಕರೆ ತನಕ ಹಿಡುವಳಿ ಭೂಮಿ ಸಕ್ರಮಗೊಳಿಸಲಾಯಿತು. ಸಕ್ರಮ ಕೋರಿ ನಮೂನೆ 50ರಲ್ಲಿ ಅರ್ಜಿ ಸ್ವೀಕರಿಸಲಾಯಿತು. ಮಂಜೂರಾತಿ ಕೋರಿ 10.90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇನ್ನೂ 5106 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಮತ್ತೊಮ್ಮೆ 1999ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕಲಂ 94(ಬಿ) ಅಡಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ 53ರಲ್ಲಿ ಅರ್ಜಿ ಆಹ್ವಾನಿಸಲಾಯಿತು. ಮಂಜೂರಾತಿ ಕೋರಿ 14.94 ಲಕ್ಷ ಅರ್ಜಿಗಳು ಸಲ್ಲಿಕೆಯಾದವು. ಇನ್ನೂ 1 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. 2019ರಲ್ಲಿ ಮತ್ತೊಮ್ಮೆ ಕಲಂ 94(ಬಿ)ಗೆ ತಿದ್ದುಪಡಿ ತಂದು ನಮೂನೆ 57ರಲ್ಲಿ ಅರ್ಜಿ ಆಹ್ವಾನಿಸಲಾಯಿತು. ಆಗಲೂ 11.22 ಲಕ್ಷ ಅರ್ಜಿಗಳು ಸಲ್ಲಿಕೆಯಾದವು. ಈ ಅರ್ಜಿಗಳಲ್ಲಿ 9.33 ಲಕ್ಷ ಅರ್ಜಿಗಳು ಬಾಕಿ ಇವೆ. ಒಟ್ಟಾರೆ 10.49 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.
ಈಗ ತನಿಖೆ ನಡೆದಿರುವ ಕಡೆ ಮಾತ್ರವಲ್ಲ, ಎಲ್ಲಾ ಕಡೆಯೂ ಅಕ್ರಮ ಮಂಜೂರಾತಿ ನಡೆದಿವೆ. ಹಿಂದಿನ ಹತ್ತು ವರ್ಷಗಳ ಅವಧಿಯ ಮಂಜೂರಾತಿ ಬಗ್ಗೆ ಕಂದಾಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಆಗ ಎಲ್ಲವೂ ಬಹಿರಂಗವಾಗಲಿದೆ.
–ಗುರುಶಾಂತಪ್ಪ, ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ
‌ಪೂರಕ ಮಾಹಿತಿ: ಚಿದಂಬರ ಪ್ರಸಾದ, ವಿಕ್ರಂ ಕಾಂತಿಕೆರೆ, ಮನೋಜಕುಮಾರ್‌ ಗುದ್ದಿ, ಸೂರ್ಯನಾರಾಯಣ ವಿ.,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT