ಗ್ರಾಮ ಪಂಚಾಯಿತಿಗಳ ತೆರಿಗೆಯನ್ನು ವಸೂಲಿ ಮಾಡಲು ಇದೇ ಮೊದಲ ಬಾರಿಗೆ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಂಡು ಪಿಒಎಸ್ ಮಷಿನ್‌ಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು ₹ 500 ಕೋಟಿ ಹೆಚ್ಚುವರಿ ತೆರಿಗೆ ಮೊತ್ತ ಸಂಗ್ರಹವಾಗಿದೆ.
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ
ನಿರಂತರ ಅಭಿಯಾನದ ಕಾರಣ ತೆರಿಗೆ ಸಂಗ್ರಹ ಉತ್ತಮವಾಗಿದೆ. ಬರ ಇಲ್ಲದಿದ್ದರೆ ಹೆಚ್ಚು ಸಂಗ್ರಹವಾಗುತ್ತಿತ್ತು. ಬಾಕಿ ಮೊತ್ತದ ವಸೂಲಿಗೂ ಯತ್ನ ನಡೆದಿದೆ
–ರಾಹುಲ್ ಶರಣಪ್ಪ ಸಂಕನೂರ ಸಿಇಒ ಜಿಲ್ಲಾ ಪಂಚಾಯಿತಿ ಬಳ್ಳಾರಿ
ತಾಂತ್ರಿಕ ಸಮಸ್ಯೆಯಿಂದ ತೆರಿಗೆ ಸಂಗ್ರಹದಲ್ಲಿ ಏರುಪೇರಾಗಿದೆ. ಕೆಲವೆಡೆ ಸಂಪೂರ್ಣ ಸಂಗ್ರಹವಾಗಿದ್ದರೂ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಆಗುತ್ತಿಲ್ಲ.
ವಿಶ್ವನಾಥ ಬೈಲಮೂಲೆ ಪಿಡಿಒ ಅನಂತಾಡಿ ಗ್ರಾ.ಪಂ. ದಕ್ಷಿಣ ಕನ್ನಡ
ಕೆಲವು ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆಯಾಗಿದೆ. ಇನ್ನೂ ಕೆಲವೆಡೆ ಮಾಡಿಲ್ಲ. ಇದರಿಂದಾಗಿ ಸಂಗ್ರಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ.
ಸುರೇಶ್ ಇಟ್ನಾಳ್ ಸಿಇಒ ಜಿಲ್ಲಾ ಪಂಚಾಯಿತಿ ದಾವಣಗೆರೆ
ಈ ವರ್ಷ ಬರವಿದೆ. ಜನರಲ್ಲಿ ಹಣವಿಲ್ಲ. ತೆರಿಗೆ ಪಾವತಿಸಲು ಆಸಕ್ತಿ ತೋರಿಲ್ಲ. ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ
ವಿನಾಯಕ ಪ್ರಕಾಶ ಧನಿಗೊಂಡ ಅಧ್ಯಕ್ಷ ಹಿರೆ ಹೊನ್ನಳ್ಳಿ ಗ್ರಾ.ಪಂ. ಕಲಘಟಗಿ ತಾಲ್ಲೂಕು ಧಾರವಾಡ ಜಿಲ್ಲೆ