ಗೋಕರ್ಣ: ಇಲ್ಲಿಯ ಮಿಡ್ಲ್ ಬೀಚಿನ ಕರಿಯಪ್ಪಕಟ್ಟೆಯ ಬಳಿ, ಸಮುದ್ರ ದಂಡೆಯಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬೆಂಗಳೂರಿನ ಚಿಕ್ಕಬಾಣಾವರದ ಎ.ಜಿ.ಬಿ ಲೇಔಟಿನ ನಿವಾಸಿ ಪದ್ಮನಾಭ ಶ್ರೀಹರಿ ಪಾಟೀಲ್ (25) ಮತ್ತು ದಾಸರಹಳ್ಳಿಯ ಕಾಳಶ್ರೀ ನಗರದ ನಿವಾಸಿ ಸೂರಜಕುಮಾರ್ ದಿನೇಶ ಮಂಡಲ್ (27) ಆರೋಪಿಗಳು.

‘4 ಜನ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿಯ ಮಿಡ್ಲ್ ಬೀಚಿನ ಕರಿಯಪ್ಪಕಟ್ಟೆಯ ಬಳಿಯ ಆರ್.ಕೆ.ಕಾಟೇಜ್ ಎದುರಿನ ಸಮುದ್ರ ದಂಡೆಲ್ಲಿ ಗಾಂಜಾ ಸೇವಿಸಿದ ಅಮಲಿನಲ್ಲಿ ತೇಲಾಡುತ್ತಿದ್ದಾಗ ಸಿ.ಪಿ.ಐ ವಸಂತ ಆಚಾರ್ ನೇತೃತ್ವದ ಪೊಲೀಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಸಂಶಯ ಬಂದ ಪೊಲೀಸರು ನಾಲ್ಕೂ ಜನರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆೆಗೆ ಒಳಪಡಿಸಿದಾಗ, ಇಬ್ಬರು ಗಾಂಜಾ ಸೇವಿಸಿದ್ದು ದೃಢಪಟ್ಟಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.