ದಾಂಡೇಲಿ: ಸಿ.ಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲುರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅಸಂವಿಧಾನಿಕ ಮತ್ತು ರಾಜ್ಯಪಾಲರು ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿರುವದನ್ನು ಖಂಡಿಸುತ್ತೇನೆ ಎಂದು ಶಾಸಕ ಹಾಗೂ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಶನಿವಾರ ನಗರದ ಪೇಪರ್ ಮಿಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ಅಬ್ರಾಹಂ ಎನ್ನುವವರು ಸಿ.ಎಂ ಸಿದ್ದರಾಮಯ್ಯ ವಿರುದ್ದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ರಾಜ್ಯಪಾಲರು ಸಿಎಂ ವಿರುದ್ದ ಕಾನೂನು ವಿಚಾರಣೆಗೆ ಅನುಮತಿ ನೀಡಿರುವುದು, ಅವರ ಸ್ಥಾನಮಾನಕ್ಕೆ ಇದು ಗೌರವವಲ್ಲ. ಅವರು ಸರ್ವಾಧಿಕಾರ ಬಳಿಸಿಕೊಂಡಿದ್ದು ತಪ್ಪಾಗುತ್ತದೆ. ಕೇಂದ್ರದ ಎನ್‌ಡಿಎ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ರಾಜ್ಯಪಾಲರು ಈ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಕ್ರಮಕೈಗೊಂಡಿದ್ದಾರೆ. ಅವರು ಸಂವಿಧಾನಕ್ಕೂ ಹಾಗೂ ಕರ್ನಾಟಕ ರಾಜ್ಯದ ಜನತೆಗೂ ಅವಮಾನ ಮಾಡಿದ್ದಾರೆ ಎಂದರು.

ನಾನು ಕಳೆದ 50 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಆದರೆ, ಈ ಹಿಂದೆ ಯಾವ ರಾಜ್ಯಪಾಲರೂ ಈ ತರದ ಕ್ರಮ ತೆಗೆದುಕೊಂಡ ಇತಿಹಾಸವಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಇಂತಹ ಅಸಂವಿಧಾನಿಕ ಘಟನೆಗಳೇ ನಡೆದಿಲ್ಲ. ರಾಜ್ಯಪಾಲರ ಕ್ರಮವನ್ನು ತೀರ್ವವಾಗಿ ಖಂಡಿಸುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.