ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಮೇ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ನೌಕರರಿಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಸ್ಥಳೀಯ ಘಟಕದ ಸದಸ್ಯರು ಬುಧವಾರ ಇಲ್ಲಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

‘ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ನೌಕರರನ್ನು ವೇತನದಿಂದ ವಂಚಿತರನ್ನಾಗಿ ಮಾಡಬಾರದೆಂದು ಕೇಂದ್ರ ಗೃಹ ಸಚಿವಾಲಯವು ಕಾನೂನನ್ನು ಉಲ್ಲೇಖಿಸಿ, ತಿಳಿಸಿದೆ. ಆದರೆ, ಶಿರಸಿ ವಿಭಾಗೀಯ ಸಾರಿಗೆ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘಿಸಿ, ಈ ವಿಭಾಗದ ಸಾರಿಗೆ ನೌಕರರಿಗೆ ಮೇ ತಿಂಗಳ ವೇತನ ನೀಡಿಲ್ಲ. ಅಧಿಕಾರಿಗಳು, ನೌಕರರು ರಜೆ ಅರ್ಜಿಯನ್ನು ಕೊಟ್ಟರೆ ಮಾತ್ರ, ಮೇ ತಿಂಗಳ ವೇತನವನ್ನು ಬಿಡುಗಡೆ ಮಾಡುವುದಾಗಿ ನಿರ್ಬಂಧ ಹೇರುತ್ತಿದ್ದಾರೆ. ಅಲ್ಲದೇ, ನೌಕರರು ಕರ್ತವ್ಯಕ್ಕೆ ಹಾಜರಾದ ಅವಧಿಗೆ ತಮ್ಮದೇ ವೈಯಕ್ತಿಕ ರಜೆಯನ್ನು ಕೊಟ್ಟರೆ ಮಾತ್ರ ವೇತನ ನೀಡುವ ಕರಾರನ್ನು ಹಾಕುತ್ತಿದ್ದಾರೆ. ಇದು ಶಿರಸಿ ವಿಭಾಗದ ಸಾರಿಗೆ ನೌಕರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಮತ್ತು ವಾಸ್ತವದ ಹಾಜರಾತಿಯನ್ನು ಪರಿಗಣಿಸಿ, ತಕ್ಷಣವೇ ವೇತನ ವಿತರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಸಂಘಟನೆ ಪ್ರಮುಖರಾದ ಕೆ.ಆರ್.ಮುಕುಂದನ್, ಪ್ರಕಾಶಮೂರ್ತಿ, ಅರುಣ ಭೋಸಲೆ, ಸಂಜೀವ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.