ಕಾರವಾರ: ಸ್ಫೋಟಕಗಳನ್ನು ಅನುಮತಿಯಿಲ್ಲದೇ ಹಾಗೂ ಅಸುರಕ್ಷಿತವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ನಗರದ ಲಂಡನ್ ಬ್ರಿಜ್ ಬಳಿ ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ 84 ಜಿಲೆಟಿನ್ ಕಡ್ಡಿಗಳು, ನಾಲ್ಕು ಡಿಟೋನೇಟರ್‌ಗಳು ಹಾಗೂ ಕಾರನ್ನು ಜಪ್ತಿ ಮಾಡಿದ್ದಾರೆ.

ಅಂಬಿಕಾನಗರದ ಕೂಲಿ ಕಾರ್ಮಿಕ ಬಾಲಮುರುಗನ್ (40) ಮತ್ತು ಮಾಜಾಳಿಯ ಗಾಂವಗೇರಿಯ ಗುತ್ತಿಗೆದಾರ ಆನಂದ ನಾಯ್ಕ (42) ಬಂಧಿತರು. ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಅಂಕೋಲಾದ ರಾಜನ್ ಎಂಟರ್‌ಪ್ರೈಸಸ್ ಮತ್ತು ಮುಂಬೈನ ಮಾಡರ್ನ್ ರೋಡ್ ಮೇಕರ್ಸ್ ಸಂಸ್ಥೆಗಳನ್ನೂ ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಬಂಧಿತರು ಈ ಸಂಸ್ಥೆಗಳಿಂದ ಸ್ಫೋಟಕಗಳನ್ನು ಪಡೆದುಕೊಂಡು ಬೇರೆಡೆಗೆ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್‌ಗಳನ್ನು ಪ್ರತ್ಯೇಕ ವಾಹನಗಳ ಬದಲು, ಒಂದೇ ಕಾರಿನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾಹಿತಿ ಪಡೆದ ನಗರಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂತೋಷಕುಮಾರ.ಎಂ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.