ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ | ಭಾರಿ ಮಳೆ: ಮನೆಗೆ ಹಾನಿ

Published 25 ಜುಲೈ 2024, 14:33 IST
Last Updated 25 ಜುಲೈ 2024, 14:33 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಮನೆ ಹಾಗೂ ಶಾಲೆ ಕಟ್ಟಡದ ಮೇಲೆ ಮರ ಬಿದ್ದು ಹಾನಿಯಾಗಿದೆ.

ತೆಂಗಿನಗುಂಡಿ ನಿವಾಸಿ ನಾರಾಯಣ ಶನಿಯಾರ ದೇವಾಡಿಗ ಅವರ ಮನೆಯ ಮೇಲೆ ಮರ ಬಿದ್ದಿದೆ. ಬಡ್ಡುಕುಳಿ ನಿವಾಸಿ ಸುರೇಶ ನಾಗಪ್ಪ ನಾಯ್ಕ ಮನೆಯು ಕುಸಿದು ಭಾಗಶಃ ಹಾನಿಯಾಗಿದೆ. ಶಿರಾಲಿ ನಿವಾಸಿ ನಾರಾಯಣಿ ವೆಂಕಟ್ರಮಣ ದೇವಾಡಿಗ ಮನೆಯ ಚಾವಣಿ ಕುಸಿದು ಭಾಗಶಃ ಹಾನಿಯಾಗಿದೆ. ಸಣಬಾವಿಯ ದುರ್ಗಮ್ಮಾ ನಾರಾಯಣ ಜಟ್ಟ ನಾಯ್ಕ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೆಬಳೆ ನಿವಾಸಿ ಅಬ್ದುಲ್ ಹಮೀದ್ ಸುಲೇಮಾನ್ ಅಲ್ಲಾವೋ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮಾವಳ್ಳಿಯ ದಿವಗೇರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಶಿರಾಲಿ ನಿವಾಸಿ ಭಾರತಿ ಮಂಜುನಾಥ ದೇವಾಡಿಗ ಅವರ ಮನೆಯ ಚಾವಣಿ ಹಾರಿ ಹೋಗಿದೆ.

ಶಿರಾಲಿ ನಿವಾಸಿ ಗೋಯ್ದ ಗಣಪಯ್ಯ ದೇವಾಡಿಗ ಮನೆಯ ಚಾವಣಿ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರಿ ಮಳೆಗಾಳಿಗೆ ಸಮುದ್ರದ ಅಲೆಗಳ ಭೋರ್ಗರೆತ ಜಾಸ್ತಿಯಾಗಿದ್ದು, ಎಚ್ಚರಿಕೆ ಕ್ರಮವಾಗಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಹೆಗ್ಗದ್ದೆ ಕಿರಿಯ ಪ್ರಾಥಮಿಕ ಶಾಲೆ ಮಳೆಗೆ ಕುಸಿದಿರುವುದು
ಹೆಗ್ಗದ್ದೆ ಕಿರಿಯ ಪ್ರಾಥಮಿಕ ಶಾಲೆ ಮಳೆಗೆ ಕುಸಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT