ಭಟ್ಕಳ: ಬೆಂಗಳೂರು ಮೂಲದ ವಿದ್ಯಾರ್ಥಿ ಭಾನುವಾರ ಮುರುಡೇಶ್ವರದ ಕಡಲಿನಲ್ಲಿ ಈಜಲು ತೆರಳಿ ಮೃತಪಟ್ಟ ಹಿನ್ನೆಲೆಯಲಿ ಭಟ್ಕಳ ಉಪವಿಭಾಗಾಧಿಕಾರಿ ಆದೇಶದಂತೆ ಸೋಮವಾರದಿಂದ ಪ್ರವಾಸಿಗರಿಗೆ ಮುರುಡೇಶ್ವರ ಬೀಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಅಕ್ಟೋಬರ್ ರಜೆ ಕಳೆಯಲು ಬರುವ ಪ್ರವಾಸಿಗರು ಬೀಚ್ಗೆ ತೆರಳದಂತಾಗಿದೆ.

ಸಾಲು ಸಾಲು ರಜೆಯ ಸಂದರ್ಭದಲ್ಲಿ ಮುರುಡೇಶ್ವರಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಸುರಕ್ಷತೆಗಾಗಿ ಪ್ರವಾಸೋದ್ಯಮ ಇಲಾಖೆಯೂ ಅಗತ್ಯ ಜೀವ ರಕ್ಷಕ ಸಿಬ್ಬಂದಿ ಹಾಗೂ ಸಾಧನ ಪೂರೈಸುವ ತನಕ ಬೀಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಜಿಲ್ಲಾಧಿಕಾರಿಯ ಮೌಖಿಕ ಆದೇಶ ಉಲ್ಲೇಖಿಸಿ, ಭಟ್ಕಳ ಉಪವಿಭಾಗಾಧಿಕಾರಿ ನಯನಾ ಅವರು ಭಟ್ಕಳ ಡಿವೈಎಸ್ಪಿಗೆ ಸೋಮವಾರ ಪತ್ರ ಬರೆದು ಬೀಚ್ ಪ್ರವೇಶಕ್ಕೆ ನಿರ್ಭಂದ ವಿಧಿಸುವಂತೆ ಸೂಚಿಸಿದ್ದಾರೆ.

ಪ್ರವಾಸಿಗರಿಗೆ ನಿರಾಶೆ: ಮುರುಡೇಶ್ವರಕ್ಕೆ ನಿತ್ಯ ಸಾವಿರಾರು ಜನರು ಭೆಟಿ ನೀಡಿ ಜಲಕ್ರೀಡೆಯಾಡಿ, ಕಡಲ ಆನಂದ ಅನುಭವಿಸುತ್ತಾರೆ. ಮುರುಡೇಶ್ವರದಿಂದ ಪ್ರವಾಸೋದ್ಯಮ ಇಲಾಖೆಗೆ ವಾರ್ಷೀಕ ಕೋಟ್ಯಂತರ ರೂಪಾಯಿ ಆದಾಯ ಇದ್ದರೂ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಸಾಧನ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡದಿರುವುದು ಜವಾಬ್ದಾರಿಯುತ ನಡೆಯಲ್ಲ’ ಎಂದು ಸ್ಥಳೀಯರಾದ ಕೃಷ್ಣ ನಾಯ್ಕ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.