ಶಿರಸಿ: ಕಲಬುರಗಿ ವಕೀಲ ಈರಣ್ಣ ಗೌಡ ಪಾಟೀಲ ಹತ್ಯೆ ಖಂಡಿಸುವ ಜತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ವಕೀಲರ ಸಂಘದ ಶಿರಸಿ ಘಟಕದ ಸದಸ್ಯರು ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ವಕೀಲ ಈರಣ್ಣ ಗೌಡ ಪಾಟೀಲ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ವಕೀಲರ ಸಂಘವು ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಮಾಜದಲ್ಲಿ ಕಾನೂನು ಪ್ರಕಾರ ಕಾರ್ಯನಿರ್ವಹಿಸುವ ವಕೀಲರ ಮೇಲೆ ಇತ್ತೀಚೆಗೆ ಹಲ್ಲೆ ಮತ್ತು ಕೊಲೆ ಮಾಡುತ್ತಿರುವುದನ್ನು ನೋಡಿದರೆ ರಕ್ಷಣೆಯೇ ಇಲ್ಲದಂತಾಗಿದೆ. ಇದರಿಂದ ವಕೀಲರಿಗೆ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ನ್ಯಾಯಕ್ಕಾಗಿ ಕರ್ತವ್ಯ ನಿರ್ವಹಿಸಲು ಆತಂಕ ಎದುರಾಗಿದೆ. ಅಲ್ಲದೇ, ಸಮಾಜದಲ್ಲಿ ವಕೀಲರ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ವಕೀಲರ ಮೇಲೆ ಹಲ್ಲೆ ಮತ್ತು ಕೊಲೆ ಮಾಡಿಸುತ್ತಿರುವವರ ಮೂಲವನ್ನು ತನಿಖೆ ಮಾಡದೇ ಇರುವ ತನಿಖಾ ವೈಫಲ್ಯದಿಂದಾಗಿ ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ ತೊಡಗಿವೆ. ಈ ಕುರಿತು ತನಿಖಾ ತಂಡವನ್ನು ನೇಮಿಸಿ, ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಉಪವಿಭಾಗಾಧಿಕಾರಿ ಆರ್.ದೇವರಾಜ್ ಮನವಿ ಸ್ವೀಕರಿಸಿದರು. ವಕೀಲರಾದ ಶ್ರೀನಿವಾಸ ನಾಯ್ಕ, ಎಂ.ಎನ್.ನಾಯ್ಕ, ರಾಜೀವ ರೇವಣಕರ, ಎನ್.ಆರ್.ಶೆಟ್ಟಿ, ಆರ್.ಎನ್.ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.