ಕಾರವಾರ: ಭಾರತೀಯ ನೌಕಾದಳದ ವಿಶ್ರಾಂತ ಯುದ್ಧ ವಿಮಾನ ಟುಪಲೇವ್ (ಟಿಯು–142) ಬಿಡಿಭಾಗ ಮಂಗಳವಾರ ಕಾರವಾರಕ್ಕೆ ತಲುಪಿದೆ. ತಮಿಳುನಾಡಿನ ಅರಕ್ಕೋಣಮ್‍ನಲ್ಲಿರುವ ಐಎನ್ಎಸ್ ರಾಜೋಲಿಯಿಂದ ಬ್ಲ್ಯೂ ಸ್ಕೈ ಸಂಸ್ಥೆಯ 9 ಟ್ರಕ್‍ಗಳಲ್ಲಿ ಇವುಗಳನ್ನು ತರಲಾಯಿತು. ಒಟ್ಟು 5 ದಿನ ಬೇಕಾದವು.

ಭಾರತೀಯ ನೌಕಾದಳವು ಸುಮಾರು ನಾಲ್ಕು ಟನ್ ತೂಕದ, 50 ಮೀಟರ್ ಉದ್ದದ ಟುಪಲೇವ್ ಯುದ್ಧ ವಿಮಾನವನ್ನು ಬಿಡಿಯಾಗಿಸಲು ತಿಂಗಳ ಹಿಂದಿನಿಂದ ಕೆಲಸ ಆರಂಭಿಸಿತ್ತು. ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿರುವ ಐಎನ್ಎಸ್ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಬಳಿ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಅಸ್ತಿತ್ವಕ್ಕೆ ಬರಲಿದ್ದು, ಈ ಯುದ್ಧ ವಿಮಾನವನ್ನು ಇಲ್ಲಿ ತರಲಾಗಿದೆ.

‘ರಷ್ಯಾ ನಿರ್ಮಿತ ಟುಪಲೇವ್–142 ಯುದ್ಧ ವಿಮಾನ 1988ರಲ್ಲಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಯಿತು. 2017ರಲ್ಲಿ ಸೇವಾ ಅವಧಿ ಪೂರ್ಣವಾದ ಬಳಿಕ ಅದನ್ನು ರಾಜೋಲಿಯ ನೌಕಾನೆಲೆಯಲ್ಲಿ ಇರಿಸಲಾಗಿತ್ತು. ಇದೇ ಮಾದರಿಯ ಒಂದು ಯುದ್ಧ ವಿಮಾನವನ್ನು ವಿಶಾಖಪಟ್ಟಣಂನ ವಸ್ತು ಸಂಗ್ರಹಾಲಯದಲ್ಲಿದೆ. ಇಲ್ಲಿ ತರಲಾದ ವಿಮಾನ ಅದಕ್ಕಿಂತ ಗಾತ್ರದಲ್ಲಿ ದೊಡ್ಡದಿದೆ. ಅದರ ಸಾಗಣೆ, ಜೋಡಣೆಗೆ ₹4 ಕೋಟಿಗೂ ಹೆಚ್ಚು ವೆಚ್ಚವಾಗಿದ್ದು, ನೌಕಾದಳ ಅದನ್ನು ಭರಿಸಲಿದೆ’ ಎಂದು ನೌಕಾದಳದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಸ್ಥಾಪನೆಗೆ ನಾಲ್ಕು ವರ್ಷಗಳಿಂದ ಪ್ರಯತ್ನ ನಡೆದಿದೆ. 2020ರಲ್ಲಿ ಜಿಲ್ಲಾಡಳಿತ ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ವಿಮಾನದ ಸಾಗಣೆ, ಜೋಡಣೆಗೆ ನೌಕಾದಳ ಒಪ್ಪಿಗೆ ನೀಡಿತ್ತು. ಅದರ ಜೋಡಣೆ ಪೂರ್ಣಗೊಂಡ ಬಳಿಕ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಿ, ಅದರ ನಿರ್ವಹಣೆ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ವಿವರಿಸಿದರು.

ಟುಪಲೇವ್ ಯುದ್ಧ ವಿಮಾನ ಜೋಡಣೆಗೆ ಒಂದು ತಿಂಗಳು ಆಗಬಹುದು. ನಂತರ ವಸ್ತು ಸಂಗ್ರಹಾಲಯ ಆರಂಭವಾಗಲಿದೆ. ಈಗಾಗಲೇ ಸರ್ಕಾರ ₹2 ಕೋಟಿ ನೀಡಿದ್ದು ಅಡಿಪಾಯ ಕಾಮಗಾರಿ ಮುಗಿದಿದೆ

–ಗಂಗೂಬಾಯಿ ಮಾನಕರ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.