ಶಿರಸಿ: ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮೆರಿಟ್ಯೂಡ್ ಉದ್ಯೋಗ್ ವತಿಯಿಂದಆಳ್ವ ಫೌಂಡೇಷನ್ ಸಹಕಾರದಲ್ಲಿ ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆ.3ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆರಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಲಿಮಿಟೆಡ್‌ನ ನಿರ್ದೇಶಕ ರವೀಂದ್ರಕುಮಾರ್ ಪಡೆಸೂರ ಹಾಗೂ ವಕೀಲ ಸತೀಶ ನಾಯ್ಕ ಅವರು, ‘ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುವ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಉದ್ಯೋಗ ಮೇಳ ಸಂಘಟಿಸಲಾಗಿದೆ. ಈ ಉದ್ಯೋಗ ಮೇಳ ಉಚಿತವಾಗಿದ್ದು, ಕಂಪನಿಗಳ ಪ್ರತಿನಿಧಿಗಳೇ ನೇರವಾಗಿ ಭಾಗವಹಿಸುವ ಕಾರಣ ಹೆಚ್ಚು ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ’ ಎಂದರು.

ಉದ್ಯೋಗ ಮೇಳದಲ್ಲಿ ಬ್ಯಾಂಕಿಂಗ್, ಪ್ರವಾಸೋದ್ಯಮ, ಆರೋಗ್ಯ, ಐಟಿ, ಬಿಪಿಒ, ಸೆಕ್ಯುರಿಟಿ, ರಿಟೇಲ್, ಲಾಜಿಸ್ಟಿಕ್ ಸೇರಿದಂತೆ ವಿವಿಧ ಕ್ಷೇತ್ರಗಳ 25ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. 1500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ದ್ವಿತೀಯ ಪಿಯುಸಿ ಮೇಲ್ಪಟ್ಟು ಶಿಕ್ಷಣ ಪಡೆದವರು ಭಾಗವಹಿಸಬಹುದು. ಮೇಳದಲ್ಲಿ ಭಾಗವಹಿಸುವವರು ಸ್ವ ವಿವರ ಹಾಗೂ ದಾಖಲೆಗಳ 8–10 ನಕಲು ಪ್ರತಿಗಳನ್ನು ತರಬೇಕು. ಇದರಿಂದ ಬೇರೆ ಬೇರೆ ಕಂಪನಿಗಳ ಸಂದರ್ಶನ ಎದುರಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಮಾಹಿತಿಗೆ 08384– 234513, 8884461672 ಈ ಸಂಖ್ಯೆ ಸಂಪರ್ಕಿಸಬಹುದು ಎಂದು ಹೇಳಿದರು. ಜಗದೀಶ ಭೋವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.