ಕಾರವಾರ: ‘ತಂಬಾಕು ಪದಾರ್ಥಗಳ ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ಅದರ ಸೇವನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ’ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ವಿಠಲ ಧಾರವಾಡಕರ ಅಭಿಪ್ರಾಯಪಟ್ಟರು.

ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ‘ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಈಚೆಗೆ ಜನರಲ್ಲಿ ಅರಿವು ಮೂಡಿದೆ. ತಂಬಾಕು ಬೆಳೆ ಬೆಳೆಸುವಿಕೆಯಲ್ಲಿಯೂ ಇಳಿಕೆ ಕಾಣುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎನ್.ಅಶೋಕಕುಮಾರ ಮಾತನಾಡಿ, ‘ಸಿಗರೇಟ್ ಸೇರಿದಂತೆ ತಂಬಾಕುವಿನ ವಿವಿಧ ಉತ್ಪನ್ನಗಳಿಗೆ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯ. ಇವುಗಳ ಸೇವನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ’ ಎಂದರು.

‘ವಿವಿಧೆಡೆ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಕಾಯ್ದೆ ರೂಪಿಸಿದ್ದರೂ ಅದರ ಉದ್ದೇಶ ಈಡೇರುತ್ತಿಲ್ಲ.
ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಅಥವಾ ಜನರ ಸಹಭಾಗಿತ್ವದೊಂದಿಗೆ ಮಾತ್ರ ಇದರ ನಿಯಂತ್ರಣ ಸಾಧ್ಯವಿದೆ’ ಎಂದರು.

ಉಪನ್ಯಾಸ: ವಕೀಲ ನಿತಿನ ರಾಯ್ಕರ, ಮಾದಕ ದ್ರವ್ಯಗಳ ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ ನೀಡಿದರು. ‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಈಗಾಗಲೇ ಕಾಯ್ದೆ ಜಾರಿಗೊಳಿಸಿದೆ. ಇದರ ಪ್ರಕಾರ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸಾರಿಗೆ, ಹೊಟೇಲ್, ಉದ್ಯಾನ, ಆಸ್ಪತ್ರೆ, ಶಾಲೆ ಇತ್ಯಾದಿ ಕಡೆ ಧೂಮಪಾನ ಮಾಡಿದರೆ ₹ 200 ದಂಡ ವಿಧಿಸಲು ಅವಕಾಶವಿದೆ. 18 ವರ್ಷದ ಒಳಗಿನವರಿಗೆ ತಂಬಾಕಿನ ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಇದರ ಉಲ್ಲಂಘನೆಗೂ ದಂಡ ವಿಧಿಸಲಾ
ಗುತ್ತದೆ. ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಡೆಸುತ್ತಿರುವುದು ಕಂಡು ಬಂದರೆ ದೂರು ನೀಡಬಹುದಾಗಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ವಿನೋದ ಭೂತೆ, ತಂಬಾಕು ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ‘ಯುವ ಜನ ಜೀವನ ಆಯ್ಕೆ ಮಾಡಿಕೊಳ್ಳಬೇಕು ಹೊರತು ತಂಬಾಕನ್ನು ಅಲ್ಲ. ಅದರ ಸೇವನೆ ಹೃದಯ ಕಾಯಿಲೆಗೆ ಮುಖ್ಯ ಕಾರಣವಾಗಿದೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ ಬಿ, ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಹೆಚ್ಚುವರಿ ಸಿವಿಲ್ ನಾಯಾಧೀಶ ವಿವೇಕ ಗ್ರಾಮೋಪಾಧ್ಯೆ ಇದ್ದರು.

ವ್ಯಸನ ವಿನಾಶಕ್ಕೆ ಸಲಹೆ

ಹಳಿಯಾಳ: ನಮ್ಮ ತಂಬಾಕು ವ್ಯಸನ ವಿನಾಶದಿಂದ ಮಾತ್ರ ಸಮಾಜ ಆರೋಗ್ಯದಿಂದ ಇರಲು ಸಾಧ್ಯ’ ಎಂದು ನ್ಯಾಯಾಧೀಶರಾದ ಶಿಲ್ಪಾ ಎಚ್.ಎ.ಹೇಳಿದರು.

ಗುರುವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಮಾತನಾಡಿದರು.. ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶ ಬಸವರಾಜ ಸನದಿ ಮಾತನಾಡಿ, ರೈತರು ತಂಬಾಕಿನ ಬದಲಾಗಿ ಪರ್ಯಾಯ ಬೆಳೆಯತ್ತ ಗಮನಹರಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಮೇಶ ಕದಂ ಮಾತನಾಡಿ, ತಂಬಾಕು ಸೇವನೆಯಿಂದ ಯುವಶಕ್ತಿ ಹಾದಿ ತಪ್ಪುತ್ತಿದೆ ಎಂದರು. ವಕೀಲ ಸಂಘದ ಅಧ್ಯಕ್ಷ ಎ.ಎಮ್.ಪಾಟೀಲ, ವಕೀಲ ಅಜೀಂ ಮುಜಾವರ್, ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪಿ.ಎಂ.ಗಸ್ತಿ ಮಾತನಾಡಿದರು. ತಹಶೀಲ್ದಾರ್ ಎಂ.ಎನ್.ಮಠದ, ಸಹಾಯಕ ಸರ್ಕಾರಿ ಅಭಿಯೋಜಕ ಅಜಿತ ಜನಗೌಡ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ, ವಕೀಲ ಸಂಘದ ಸದಸ್ಯರು ಉಪಸ್ಥಿತರಿದ್ದರು.

‘ಹಳ್ಳಿ ಮಕ್ಕಳಿಂದ ತಂಬಾಕು ಮುಕ್ತ ಪಟ್ಟಣ’

ಕಾರವಾರ: ‘ಹಳ್ಳಿಗಳಲ್ಲಿ ಹೆಚ್ಚು ತಂಬಾಕು ಹಾಗೂ ಅದರ ಉತ್ಪನ್ನ ಸೇವನೆ ಮಾಡಲಾಗುತ್ತದೆ. ಹೀಗಾಗಿ, ಅಲ್ಲಿನ ಮಕ್ಕಳನ್ನು ಈ ಕುರಿತಂತೆ ಜಾಗೃತಿಗೊಳಿಸುವ ಮೂಲಕ ತಂಬಾಕು ಮುಕ್ತ ಪಟ್ಟಣ ನಿರ್ಮಾಣ ಸಾಧ್ಯವಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿನ ಮಕ್ಕಳಿಗೆ ತಂಬಾಕುವಿನ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸದರೆ ಅರು ತಮ್ಮ ಸುತ್ತಮುತ್ತಲಿನ ಸಮುದಾಯದವರನ್ನು ಎಚ್ಚರಿಸುತ್ತಾರೆ. ಈ ಕಾರ್ಯ ಎಲ್ಲೆಡೆ ಆಗಬೇಕಿದೆ’ ಎಂದರು.

ಉಪನ್ಯಾಸ: ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ವಿಷಯದ ಕುರಿತು ವಕೀಲ ಅಶೋಕಕುಮಾರ, ಕಡ್ಡಾಯ ಶಿಕ್ಷಣದ ಹಕ್ಕು ವಿಷಯದ ಬಗ್ಗೆ ವಕೀಲೆ ನಫೀಜಾ ಎಚ್.ಅಲೈ ವಿಶೇಷ ಉಪನ್ಯಾಸ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಭತಿ ಪಾವಸ್ಕರ್, ಶಿಕ್ಷಣ ಸಮನ್ವಯ ಅಧಿಕಾರಿ ಉಮೇಶ ನಾಯಕ, ಪದ್ಮರಾಜ ಇದ್ದರು.

ತಂಬಾಕು ರಹಿತ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ, ವರ್ಷವಿಡೀ ಈ ದಿನದ ಉದ್ದೇಶ ಪಾಲನೆಯಲ್ಲಿರಬೇಕು
– ವಿಠಲ ಧಾರವಾಡಕರ, ಜಿಲ್ಲಾ ಪ್ರಧಾನ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.