ಶಿರಸಿ: ಐತಿಹಾಸಿಕ ಸ್ಥಳಗಳ ಸಂರಕ್ಷಣೆ, ಸಂಶೋಧನೆ, ಜಾಗೃತಿಯ ನಿಟ್ಟಿನಲ್ಲಿ ಬನವಾಸಿಯಲ್ಲಿ ಗ್ರಾಮೀಣ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು. ಸೋಂದಾದಲ್ಲಿ ಸ್ಥಳೀಯ ಇತಿಹಾಸ ಅಧ್ಯಯನ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೂರನೇ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಆಗ್ರಹಿಸಿದೆ.

ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ನಿರ್ಣಯ ಸ್ವೀಕರಿಸಲಾಗಿದೆ. ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಪುರಾತತ್ವ ಶಾಸ್ತ್ರಜ್ಞ ಡಾ. ಅ. ಸುಂದರ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆಯಬೇಕು. ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಎಲ್ಲ ಸ್ಮಾರಕಗಳಿರುವಲ್ಲಿ ಸ್ವಚ್ಛ ಭಾರತ ಆಂದೋಲನ ಅಭಿಯಾನದ ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು.

ಶಿರಸಿ ತಾಲ್ಲೂಕಿನ ಗುಡ್ನಾಪುರದಲ್ಲಿರುವ ರವಿವರ್ಮನ ಸ್ತಂಭ ಶಾಸನ, ಶಿಕಾರಿಪುರ ತಾಲ್ಲೂಕಿನ ಮಲವಳ್ಳಿ ಮತ್ತು ತಾಳಗುಂದ ಶಾಸನಗಳಿಗೆ ರಕ್ಷಣೆ ಒದಗಿಸಬೇಕು. ಬನವಾಸಿ ಇತಿಹಾಸ ಸಂಶೋಧನೆಗೆ ಬನವಾಸಿ ಹಾಗೂ ತಾಳಗುಂದಗಳಲ್ಲಿ ಇನ್ನಷ್ಟು ಉತ್ಖನನಗಳು ನಡೆಯಬೇಕು. ಕಾರ್ಪೊರೇಟ್ ವಲಯಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಅಥವಾ ಪ್ರಾಚೀನ ಶಾಸನಗಳ ಅಭಿವೃದ್ಧಿ ನಿಧಿ ಸಂಗ್ರಹಿಸಿ ಜೀರ್ಣಾವಸ್ಥೆಯಲ್ಲಿರುವ ಐತಿಹಾಸಿಕ ಸ್ಮಾರಕ ಉಳಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.

ಬನವಾಸಿಯಲ್ಲಿರುವ ವಸ್ತು ಸಂಗ್ರಹಾಲಯ ಸುವ್ಯವಸ್ಥಿತಗೊಳಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿ, ಐತಿಹಾಸಿಕ ಸ್ಮಾರಕಗಳ ಬಗೆಗೆ ಅಭಿಮಾನ, ನಿರಂತರ ಮೇಲ್ವಿಚಾರಣೆ ದೃಷ್ಟಿಯಿಂದ ವಸ್ತು ಸಂಗ್ರಹಾಲಯಗಳಿಗೆ ಕ್ಯೂರೇಟರ್ ನೇಮಕ, ಗೈಡ್‌ಗಳನ್ನು ಗುರುತಿಸಿ ತರಬೇತಿ ನೀಡಬೇಕು.

ಒತ್ತುವರಿಯಾಗುತ್ತಿರುವ ಪುರಾತತ್ವ ಇಲಾಖೆಯ ಜಾಗಗಳನ್ನು ಗುರುತಿಸಿ ಕಾನೂನು ಪ್ರಕಾರ ತೆರವುಗೊಳಿಸಿ ಸಂರಕ್ಷಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಐತಿಹಾಸಿಕ ಸ್ಮಾರಕ ರಕ್ಷಣೆ, ನಿರ್ವಹಣೆ ಸಮಿತಿ ರಚನೆಯಾಗಬೇಕು. ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಶ್ರೀನಿವಾಸ ಪಾಡಿಗಾರ್, ಸಮ್ಮೇಳನದ ಸಂಚಾಲಕ ಲಕ್ಷ್ಮೀಶ ಹೆಗಡೆ ಸೋಂದಾ, ಮಹಾವೀರ ಆಲೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.