ಹೊಸಪೇಟೆ: 2023-24ನೇ ಸಾಲಿನ ಜಿಲ್ಲಾ ಸಮನ್ವಯ ಶಿಕ್ಷಣ ವಿಭಾಗದಡಿ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿಯಲ್ಲಿ ಬಿಐಇಆರ್ಟಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಯೋಜನಾ ಸಮನ್ವಯಾಧಿಕಾರಿ ಜಿ.ಕೊಟ್ರೇಶ್ ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ಹಂತ 1ರಿಂದ 5ರವರೆಗೆ ಬೋಧಿಸಲು ವಿಶೇಷ ಡಿಇಡಿ ಕೋರ್ಸ್ ಉತ್ತೀರ್ಣರಾದ ಹಾಗೂ ಪ್ರೌಢಶಾಲಾ ಹಂತ 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲು ವಿಶೇಷ ಬಿಇಡಿ ಪದವಿ ಹೊಂದಿದ ಅಭ್ಯರ್ಥಿಗಳು ಇದೇ 19ರ ಒಳಗಾಗಿ ಕಾಲೇಜು ರಸ್ತೆಯ ಒಳಾಂಗಣ ಕ್ರೀಡಾಂಗಣದ ಸಮೀಪದ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ಕಾರ್ಯನಿರ್ವಹಿಸಿದ ಬಿಐಇಆರ್ಟಿ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆ ಪರಿಗಣಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಮೀಸಲಾತಿ ನಿಗದಿ; 15ರಂದು ಸಭೆ

ಹೊಸಪೇಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿ ನಿಗದಿಗಾಗಿ ಇದೇ 15ರಂದು ಬೆಳಿಗ್ಗೆ 11ಕ್ಕೆ ಸಭೆ ಆಯೋಜಿಸಲಾಗಿದೆ ಎಂದು ಕಾರ್ಯನಿವಾಹಕ ಅಧಿಕಾರಿ ರಮೇಶ್ ಜಿ.ವಿ. ತಿಳಿಸಿದ್ದಾರೆ.

2020ರಲ್ಲಿ ನಡೆದ ಗಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲಾತಿ ನಿಗದಿಪಡಿಸಲು ಸಭೆಯನ್ನು 15ರಂದು ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಜಿ. ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು, ಹೊಸಪೇಟೆ ತಾಲ್ಲೂಕು ವ್ಯಾಪ್ತಿಯ 14 ಗ್ರಾಮ ಪಂಚಾಯಿತಿಗಳ ಸದಸ್ಯರು ತಮ್ಮ ಚುನಾಯಿತ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.

ಕರ್ತವ್ಯಕ್ಕೆ ವಾಪಸಾಗಲು ಸೂಚನೆ

ಹೊಸಪೇಟೆ ತಾಲ್ಲೂಕು ವ್ಯಾಪ್ತಿಯ ಪಾಪಿನಾಯಕನಹಳ್ಳಿ ಗ್ರಾಮ ಸಹಾಯಕ ಎಂ.ಕೆ.ಸುರೇಶ್ ಅವರು ಕಚೇರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದು, ಕೆಲಸಕ್ಕೆ ಹಾಜರಾಗಲು ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ 1ರಿಂದ ಕಚೇರಿ ಕೆಲಸಕ್ಕೆ ಅನಧಿಕೃತವಾಗಿ ಗೈರಾಗಿದ್ದು, 7 ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ, ಸೇವೆಯಿಂದ ವಜಾಗೊಳಿಸಲು ನಿಯಮಾನುಸಾರ ಕ್ರಮಕೈಗೊಳ್ಳುವ ಕುರಿತು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.