ಹೊಸಪೇಟೆ (ವಿಜಯನಗರ): ಎಂಎಸ್‌ಪಿಎಲ್ ಕಂಪನಿಯು ಜೈಪುರ ಭಗವಾನ್ ಮಹಾವೀರ ಅಂಗವಿಕಲರ ಸಹಕಾರ ಸಮಿತಿಯ ಸಹಯೋಗದಲ್ಲಿ ಇದೇ 24ರಿಂದ 26ರವರೆಗೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಉಚಿತ ಜೈಪುರ ಕೃತಕ ಕಾಲು ಜೋಡಣೆ ಶಿಬಿರ ಹಮ್ಮಿಕೊಂಡಿದೆ.

ಈ ಬಾರಿ 11ನೇ ವರ್ಷದ ಶಿಬಿರ ನಡೆಯಲಿದ್ದು, ಇದುವರೆಗೆ 2,357 ಮಂದಿ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ಕಂಪನಿಯ ಸಮಾಜಸೇವಾ ವಿಭಾಗದ ಉಪಾಧ್ಯಕ್ಷ ಎಚ್.ಕೆ.ರಮೇಶ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯನಗರ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹುಟ್ಟಿನಿಂದ ಕಾಲಿನ ಅಂಗವೈಕಲ್ಯ ಹೊಂದಿರುವವರು, ಪೋಲಿಯೊ ಪೀಡಿತರು, ಅಪಘಾತದಿಂದ ಕಾಲು ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿರುವವರು ಇದರ ಪ್ರಯೋಜನ ಪಡೆಯಬಹುದು. ಹೆಸರನ್ನು ಬಿ.ಎಂ.ನಾಗರಾಜ್ (9902500250), ಎಸ್.ಎಂ.ಶಂಭುಲಿಂಗಯ್ಯ (9449135837) ಅವರಲ್ಲಿ ನೋಂದಾಯಿಸಬಹುದು ಎಂದರು.

ಈಗಾಗಲೇ 150 ಮಂದಿ ಹೆಸರು ನೋಂದಾಯಿಸಿದ್ದಾರೆ. ಕೆಲವರಿಗೆ ಪ್ರತಿ ವರ್ಷ ಕೃತಕ ಕಾಲು ಬದಲಾಯಿಸಬೇಕಾಗುತ್ತದೆ. ಅವರೂ ಶಿಬಿರಕ್ಕೆ ಬರುತ್ತಾರೆ. ಇದುವರೆಗೆ 1,155 ಮಂದಿಗೆ ಕೃತಕ ಕಾಲು, 709 ಕ್ಯಾಲಿಪರ್ಸ್, 44 ವಾಕರ್, 72 ಕೈಗೋಲು, 253 ಜನರಿಗೆ ಊರುಗೋಲು, 38 ಮಂದಿಗೆ ಗಾಲಿಕುರ್ಚಿ ಮತ್ತು 38 ಮಂದಿಗೆ ಕೈಚಾಲಿತ ಸೈಕಲ್ ನೀಡಲಾಗಿದೆ, 48 ಮಂದಿಗೆ ಲಘು ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.