ಹರಪನಹಳ್ಳಿ: ಧೈರ್ಯವನ್ನು ಪ್ರತಿಬಿಂಬಿಸುವ ‘ಚತುರನ ಚಾತುರ್ಯ’ ನಾಟಕದಲ್ಲಿರುವ ಹಲವು ಪಾತ್ರಗಳನ್ನು ಇಬ್ಬರೇ ಯುವ ಕಲಾವಿದರು ಅಭಿನಯಿಸುವ ಮೂಲಕ ಗಮನ ಸೆಳೆದರು.

ಪಟ್ಟಣದ ಕಾಶಿಮಠದ ಆವರಣದಲ್ಲಿ ಕತ್ತಲು ಬೆಳಕಿನ ರಂಗಪ್ರಯೋಗ ತಂಡದಿಂದ ನಾಟಕ ಪ್ರದರ್ಶನ ಭಾನುವಾರ ರಾತ್ರಿ ಜರುಗಿತು.

ಯಾದವ ಕವಿ ರಚಿತ ಚತುರನ ಚಾತುರ್ಯ ನಾಟಕದಲ್ಲಿ ಯುವ ರಂಗಕರ್ಮಿ ಅರುಣ್ ಕುಮಾರ ಮೇದಾರ ಮತ್ತು ರಂಗಕರ್ಮಿ ಚೇತನ್ ಅವರು ವಿವಿಧ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಗೆದ್ದರು. ಕ್ಷೌರಿಕ, ಬ್ರಾಹ್ಮಣ, ಹುಲಿ ಮತ್ತು ನರಿ ದೃಶ್ಯಗಳು ತೆರೆ ಮೇಲೆ ಬಂದಾಗ ರಂಗಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ನಾಪಿತ (ಕ್ಷೌರಿಕ), ಸೂತ್ರಧಾರ, ಹುಲಿ, ನರಿ ಪಾತ್ರಗಳಲ್ಲಿ ಮೇದಾರ ಅರುಣ್ ಕುಮಾರ, ಬ್ರಾಹ್ಮಣ, ಸೂತ್ರಧಾರ, ಹುಲಿ ಪಾತ್ರಗಳಿಗೆ ಕಾರ್ಮಿಕ್ ಕಲ್ಲುಕುಟಿಕರ್ ಜೀವ ತುಂಬಿದ್ದರು. ಸಂಗೀತ ಮತ್ತು ಬೆಳಕಿನ ನಿರ್ವಹಣೆ ಕಲಾವಿದೆ ಶ್ಯಾಮಲಾ ಅಚ್ಚುಕಟ್ಟಾಗಿ ನಿರ್ವಹಿಸಿದರು. ರಂಗದ ಮೇಲೆ ಇಬ್ಬರೇ ಯುವಕರು 12 ಪಾತ್ರಗಳಲ್ಲಿ ಅಭಿನಯಿಸಿದ್ದಕ್ಕೆ ನೆರೆದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕಲಾವಿದ ಪರಶುರಾಮ್, ‘ಕಲಾವಿದರಿಗೆ ತನು ಮನ ಧನ ಸಹಾಯದ ಮೂಲಕ ಪ್ರೋತ್ಸಾಹಿಸಬೇಕು. ಯುವ ಕಲಾವಿದರು ರಂಗಭೂಮಿ ಕಲೆಯತ್ತ ಬರುವಂತಾಗಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆರುಂಡಿ ಸುವರ್ಣ ನಾಗರಾಜ್, ಶಿಕ್ಷಕ ಜಯಮಾಲತೇಶ್, ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಣ್ಣ ಮೋರಗೇರಿ, ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ್, ರವೀಂದ್ರ ಅಧಿಕಾರ, ಚನ್ನಪ್ಪ ಮಾತನಾಡಿದರು. ಕಾಶಿನಾಥ್, ಬಾಗಳಿ ರಾಜಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.