ನಾಲತವಾಡ(ವಿಜಯಪುರ): ಕಾಲುವೆಯಲ್ಲಿ ಬಿದ್ದ ಕುರಿ ಮರಿ ರಕ್ಷಿಸಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ನಾಲತವಾಡ ಸಮೀಪದ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ನಾಗಬೇನಾಳ ಗ್ರಾಮದ ಮಂಜುನಾಥ ಮಾದರ (28) ಎಂದು ಗುರುತಿಸಲಾಗಿದೆ.

ನಾರಾಯಣಪುರ ಚೆಕ್ ಪೋಸ್ಟ್ ಹತ್ತಿರ ಇರುವ ಈ ಕಾಲುವೆ ಬಳಿ ಕುರಿಗಳನ್ನು ಮೇಯಿಸಲು ಮಂಗಳವಾರ ಮಂಜುನಾಥ ಹೋಗಿದ್ದಾಗ ಕುರಿ ಮರಿಯೊಂದು ನೀರು ಕುಡಿಯಲು ಕಾಲುವೆಗೆ ಹೋದಾಗ ಕೊಚ್ಚಿಕೊಂಡು ಹೋಗಿದೆ. ಇದನ್ನು ಗಮನಿಸಿದ ಕುರಿಗಾಯಿ ಕುರಿಮರಿ ರಕ್ಷಿಸಲು ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಕುರಿಮರಿ ರಕ್ಷಣೆ ಮಾಡಿದನಾದರೂ, ತಾನು ಈಜಿ ದಡ ಸೇರಲಾಗದೆ ಕಾಲುವೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಸ್ಥಳಕ್ಕೆ ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.