ಇಂಡಿ: ಮೊಹರಂ ಆಚರಣೆ ಅಂಗವಾಗಿ ಪಟ್ಟಣದ ಹುಸೇನ ಭಾಷಾ ಮಸೀದಿಯಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಟವಿ ಖತಾಲ ಆಚರಿಸಲಾಯಿತು.

ಹುಸೇನ್ ಭಾಷಾ ದೇವರ ಜಾತ್ರೆ ನಿಮಿತ್ತ ಇಂಡಿ ಸೇರಿದಂತೆ ಕಲಬುರಗಿ, ವಿಜಯಪುರ, ಸೋಲಾಪುರ, ಪುನಾ, ಮುಂಬೈ ಮತ್ತು ಮಹಾರಾಷ್ಟ್ರ, ಆಂಧ್ರದಿಂದ ಅಂದಾಜು 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿದರು.

ಹುಸೇನರು ಮಕ್ಕಾ ಮದೀನಾದ ಕರ್ಬಲಾ ಮೈದಾನದಲ್ಲಿ ಹುತಾತ್ಮರಾದ ನಿಮಿತ್ತ ಆಟವಿ ಖತಾಲ ಆಚರಿಸುವದು ಇಂಡಿಯಲ್ಲಿನ ಮೊಹರಂ ಜಾತ್ರೆಯ ವಿಶೇಷವಾಗಿದೆ.

ಸೋಮವಾರ ಬೆಳಿಗ್ಗೆಯಿಂದ ಭಕ್ತಾದಿಗಳು ದರ್ಶನ ಮತ್ತು ನೈವೆದ್ಯ ಅರ್ಪಣೆಗೆ ಪ್ರಾರಂಭಿಸಿದ್ದರು. ಇಂಡಿಯ ದಾದಾಗೌಡರ ಮನೆ, ನಾಡಗೌಡ, ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರ ಮನೆಯಿಂದ ನೈವೇದ್ಯ ಮೆರವಣೆಗೆಯಲ್ಲಿ ಬಂದು ಸಲ್ಲಿಸಿದರು.

ಕರಬಲ್, ಭಡಂಗ ಕುಣಿತ, ಡೊಳ್ಳು, ಹುಲಿಕುಣಿತ, ಸೇರಿದಂತೆ ತಾಷಾ, ಬೆಂಡ ಒಳಗೊಂಡ ಕಾರ್ಯಕ್ರಮಗಳು ಮಸೀದಿ ಆವರಣದಲ್ಲಿ ನಡೆದವು. ದರ್ಶನಕ್ಕೆ ಗದ್ದಲವಾಗುವ ನಿಮಿತ್ತ ಅರ್ಧ ಕಿ.ಮಿ ವರೆಗೂ ಸರತಿ ಸಾಲು ಮಾಡಲಾಗಿತ್ತು.

ಪೊಲೀಸ್ ಇಲಾಖೆ ಸಿಪಿಐ ರತನಕುಮಾರ ಜಿರಗಿಹಾಳ ಇವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮಂಗಳವಾರ ನಸುಕಿನ 4 ಗಂಟೆಯ ವರೆಗೂ ದರ್ಶನ ಮುಂದುವರಿಯಲಿದ್ದು, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ನೇತೃತ್ವದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಯ ವ್ಯವಸ್ಥೆ ಮಾಡಲಾಗಿತ್ತು.

ಮಹಾರಾಷ್ಟ್ರ ಮತ್ತು ಆಂಧ್ರದಿಂದ ಬಂದ ಭಕ್ತರಿಗೆ ದೇವಸ್ಥಾನದ ಆವರಣ ಮತ್ತು ಹಲವಾರು ಕಡೆ ತಂಗುವ ವ್ಯವಸ್ಥೆ ಮಾಡಲಾಗಿತ್ತು.

ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸರದಿಯಲ್ಲಿ ನಿಂತು ದರ್ಶನ ಪಡೆದದ್ದು ವಿಶೇಷವಾಗಿತ್ತು.

ಮಂಗಳವಾರ ಬೆಳಿಗ್ಗೆ ದೇವರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.