ಮುದ್ದೇಬಿಹಾಳ(ವಿಜಯಪುರ ಜಿಲ್ಲೆ): ಅಂಗನವಾಡಿ ಕಾರ್ಯಕರ್ತೆಯರಿಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಪಟ್ಟಣದ ಪಿಲೇಕೆಮ್ಮನಗರದ ಅಂಗನವಾಡಿ ಕೇಂದ್ರ ನಂ.1 ರಲ್ಲಿ ಶುಕ್ರವಾರ ನಡೆದಿದೆ.

ಕಾರ್ಯಕರ್ತೆಯರಾದ ಶಾಂತಾ ಮಾಮನಿ ಹಾಗೂ ರೇಣುಕಾ ರಾಮಕೋಟಿ ಎಂಬುವರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಮೊದಲು ಅದೇ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿದ್ದ ಶಾಂತಾ ಮಾಮನಿ ಅವರು ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಸಿಡಿಪಿಒ ವರದಿ ಆಧರಿಸಿ ಸಂಗಮೇಶ್ವರ ನಗರದ 1ನೇ ಅಂಗನವಾಡಿ ಕೇಂದ್ರಕ್ಕೆ ಸ್ಥಳ ಬದಲಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ ಆದೇಶ ಹೊರಡಿಸಿದ್ದರು.
.ಜಮಾಪುರ: ಶೌಚಾಲಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ.
ಅವರ ಸ್ಥಾನಕ್ಕೆ ರೇಣುಕಾ ಅವರನ್ನು ಪ್ರಭಾರಿಯಾಗಿ ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.

ರೇಣುಕಾ ಅವರನ್ನು ಕೇಂದ್ರದ ಮೇಲ್ವಿಚಾರಕರು ಗುರುವಾರ ಕರ್ತವ್ಯಕ್ಕೆ ಹಾಜರು ಮಾಡಿಸಿದ್ದರು. ಶುಕ್ರವಾರ ಬೆಳಿಗ್ಗೆ ಕೇಂದ್ರಕ್ಕೆ ಬಂದಿದ್ದ ಶಾಂತಾ ಮತ್ತು ರೇಣುಕಾ ನಡುವೆ ಮಕ್ಕಳ ಎದುರೇ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದು, ಏಕಾಏಕಿ ಇಬ್ಬರೂ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ.

ಅಕ್ಕಪಕ್ಕದವರು ಕೇಂದ್ರಕ್ಕೆ ಬಂದು ಜಗಳ ಬಿಡಿಸಿ ಬುದ್ಧಿವಾದ ಹೇಳಿದ್ದಾರೆ.
.ಪುತ್ತೂರು | ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ.
ವಿಷಯ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ರೇಣುಕಾ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಇವರಿಬ್ಬರ ಮಧ್ಯೆ ಮೊದಲಿನಿಂದಲೂ ಹಗೆತನ ಇದ್ದು, ಇಬ್ಬರ ಪರವಾಗಿ ತಾಲ್ಲೂಕಿನ ಎರಡು ಅಂಗನವಾಡಿ ಸಂಘಟನೆಗಳ ಮಧ್ಯೆಯೂ ಹೋರಾಟಗಳು ಪ್ರತಿ ಹೋರಾಟಗಳು ನಡೆದಿದ್ದವು. ಇದೀಗ ಈ ಹಂತಕ್ಕೆ ಕಾರ್ಯಕರ್ತೆಯರು ಹೊಡೆದಾಡುವ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಈ ಕುರಿತು ಸಿಡಿಪಿಒ ಶಿವಮೂರ್ತಿ ಕುಂಬಾರ ಅವರನ್ನು ಸಂಪರ್ಕಿಸಿದಾಗ ಘಟನೆಯ ಕುರಿತು ಮಾಹಿತಿ ಬಂದಿದ್ದು ಶನಿವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದಿದ್ದಾರೆ. ಪಿಲೇಕೆಮ್ಮ ನಗರದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಕಳೆದ 30 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆಯಲ್ಲಿರುವ ಶಾಂತಾ ಅವರನ್ನು ವರ್ಗಾವಣೆ ಮಾಡಿರುವುದೇ ಈ ಅವಾಂತರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
.ಕೋಲಾರ | ಜೂನಿಯರ್ ಕಾಲೇಜು ಉಪನ್ಯಾಸಕರ ನಡುವೆ ಹೊಡೆದಾಟ: ಆಸ್ಪತ್ರೆಗೆ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.