ವಿಜಯಪುರ: ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಬಳಗದ ಕೊಡುಗೆ ಅಪಾರವಾಗಿದ್ದು, ಪ್ರತಿಷ್ಠಾನದಿಂದ ಇನ್ನು ಅನೇಕ ಉತ್ತಮ ಕೆಲಸಗಳಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ 2019-20 ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಚಡಚಣ ಸುತ್ತಮುತ್ತಲಿನಿಂದ ಅದ್ವಿತೀಯ ಸಾಹಿತಿಗಳು, ಕವಿಗಳು, ಸಾಧಕರು ಬಂದಿದ್ದಾರೆ. ಇವರನ್ನು ಯುವಜನರಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರು.

ಪ್ರತಿಷ್ಠಾನಕ್ಕೆ ಅಗತ್ಯವಿರುವ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಗುವುದು. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಪ್ರತಿಷ್ಠಾನ ಹೊರತಂದಿರುವ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ,ಇಂಡಿ, ಸಿಂದಗಿ, ವಿಜಯಪುರ ಭಾಗದ ಜನರು ಶ್ರೇಷ್ಠ ಜನರಾಗಿದ್ದಾರೆ. ನಿಸ್ವಾರ್ಥಿಗಳು, ನಿಷ್ಪಕ್ಷಪಾತಿಗಳು ಅಗಿದ್ದು, ಇಂತಹ ಜನರನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಪ್ರಶಸ್ತಿ ಪ್ರದಾನ:2019ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ.ಜಿನದತ್ತ ದೇಸಾಯಿ, ಯುವ ಸಾಹಿತಿ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.

2020ನೇ ಸಾಲಿನ ಕಾವ್ಯ ವಿಭಾಗದ ಪ್ರಶಸ್ತಿಯನ್ನು ಡಾ.ನಾ.ಮೊಗಸಾಲೆ, ಸಂಶೋಧನ/ವಿಮರ್ಶೆ ಕ್ಷೇತ್ರದ ಪ್ರಶಸ್ತಿಯನ್ನು ಡಾ.ಗುರುಲಿಂಗ ಕಾಪಸೆ, ಜಾನಪದ ಸಾಹಿತ್ಯ ಸಾಧನೆಗೆ ಡಾ.ಶ್ರೀ ರಾಮ ಇಟ್ಟಣ್ಣವ ಅವರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರದಾನ ಮಾಡಿದರು.

ಇನ್ನುಳಿದ ಪ್ರಶಸ್ತಿ ವಿಜೇತರಾದ ಡಾ.ವೈ.ಸಿ.ಭಾನುಮತಿ, ಡಾ.ರಾಮೇಗೌಡ ಮತ್ತು ಟಿ.ಎಸ್.ಗೊರವರ ಕಾರ್ಯಕ್ರಮಕ್ಕೆ ಗೈರಾಗಿದ್ದರು

ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್,ಪ್ರತಿಷ್ಠಾನದ ಸಂಚಾಲಕ ಪ್ರೊ.ದೊಡ್ಡಣ್ಣ ಬಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಈರಪ್ಪ ಆಶಾಪೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.