ಕೊಲ್ಹಾರ: ಪಟ್ಟಣದ ಸಂಗಮೇಶ್ವರ ಪ್ರಾಥಮಿಕ ಶಾಲೆಯು ‘ಫಿಟ್ ಇಂಡಿಯಾ ಶಾಲಾ ಸಪ್ತಾಹ’ದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡು ‘ಫಿಟ್ ಇಂಡಿಯಾ ಶಾಲೆ’ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.

ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ದೈಹಿಕ ಸದೃಢತೆ ಹಾಗೂ ಮಾನಸಿಕ ಸ್ವಾಸ್ಥ್ಯ, ಆರೋಗ್ಯಕರ ಆಹಾರ ಸೇವನೆ ಹಾಗೂ ಪರಿಸರ ಸ್ನೇಹಿ ಜೀವನ ಶೈಲಿಗಾಗಿ ಪ್ರೇರೇಪಿಸಲು ಡಿ.16 ರಿಂದ 21ರ ವರೆಗೆ ಏಳು ದಿನ ಶಾಲೆಗಳಲ್ಲಿ ‘ಫಿಟ್ ಇಂಡಿಯಾ ಶಾಲಾ ಸಪ್ತಾಹ’ದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಲಾಗಿತ್ತು.

ಅದರಂತೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಸಂಗಮೇಶ್ವರ ಪ್ರಾಥಮಿಕ ಶಾಲೆಯ 320 ಮಕ್ಕಳು ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ನೇತೃತ್ವದಲ್ಲಿ ಡಿ.16 ರಂದು ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ ಸಪ್ತಾಹಕ್ಕೆ ಚಾಲನೆ ನೀಡಿದ್ದರು.

ಸಪ್ತಾಹದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡು ಕಾರ್ಯಕ್ರಮದ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರೈಸಿದರು. ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆ, ವ್ಯಾಯಾಮ, ಯೋಗಾಸನ, ಶಾಲಾ ಕೈತೋಟ ನಿರ್ವಹಣೆ ಸೇರಿದಂತೆ ಸದೃಢ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಕ್ರೀಡೆ ಕುರಿತು ಚರ್ಚೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಉಪನ್ಯಾಸ ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ‘ಖೇಲೋ ಇಂಡಿಯಾ’ ಆ್ಯಪ್ ಬಳಸಿಕೊಂಡು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯದ ಮೌಲ್ಯಮಾಪನ ಮಾಡಲಾಯಿತು. ಏಳು ದಿನಗಳ ಈ ಕಾರ್ಯಕ್ರಮ ಚಟುವಟಿಕೆಗಳಲ್ಲಿ ಶಿಕ್ಷಕರು ಹಾಗೂ ಪೋಷಕರು ಸಹ ಪಾಲ್ಗೊಂಡಿದ್ದರು.

ಮಾರ್ಗಸೂಚಿಯಂತೆ ಶಾಲೆಯು ಪ್ರತಿ ದಿನದ ಕಾರ್ಯಕ್ರಮಗಳ ಹಾಗೂ ಚಟುವಟಿಕೆಗಳ ಫೋಟೋಗಳನ್ನು ‘ಫಿಟ್ ಇಂಡಿಯಾ’ ಹಾಗೂ ‘ಖೇಲೋ ಇಂಡಿಯಾ’ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡಿ ಆನ್ಲೈನ್ ಮೂಲಕವೇ ‘ಫಿಟ್ ಇಂಡಿಯಾ ಶಾಲೆ’ ಪ್ರಮಾಣ ಪತ್ರ ಪಡೆದುಕೊಂಡಿದೆ. ಅಲ್ಲದೇ, ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್.ಕುಬಕಡ್ಡಿ ಅವರಿಗೆ ಉತ್ತಮ ಸಂಘಟಕ ಹಾಗೂ ಸಂಯೋಜಕ ಪ್ರಮಾಣ ಪತ್ರ ಸಹ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.