ಸಿಂದಗಿ: ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಬಗ್ಗೆ ನಿರ್ಲಕ್ಷ್ಯಧೋರಣೆ ಅನುಸರಿಸಲಾಗಿದೆ ಎಂದು ಸಭೆಯಲ್ಲಿ ಗದ್ದಲ ಉಂಟಾಗಿ ಕಾಯಕ ಶರಣರ ಅನುಯಾಯಿಗಳು ಸಭೆ ಬಹಿಷ್ಕರಿಸಲು ಮುಂದಾದಾಗ ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಎಲ್ಲರ ಮನವೊಲಿಸಿದ ನಂತರ ಕಾರ್ಯಕ್ರಮ ನಡೆಯಿತು.

ಸರ್ಕಾರಿ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಜಯಂತಿ ಕಾರ್ಯಕ್ರಮಕ್ಕೆ ಗೈರು ಉಳಿದಿರುವುದು ಸರಿಯಲ್ಲ. ಗೈರಾದವರಿಗೆ ತಾಲ್ಲೂಕು ಆಡಳಿತ ನೋಟಿಸ್ ನೀಡಬೇಕು ಎಂದು ಸಾಯಬಣ್ಣ ಪುರದಾಳ ಒತ್ತಾಯಿಸಿದರು.

ಕಾಯಕ ಶರಣರ ವೃತ್ತಗಳನ್ನು ಸ್ವಚ್ಛಗೊಳಿಸಲು ಮುಂದಾಗದ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೇವರಮನಿ ಸಾಯಬಣ್ಣ ಆಗ್ರಹಿಸಿದರು.

ಕಾಯಕ ಶರಣ ಜಯಂತಿ ಸರಳವಾಗಿ ಆಚರಿಸಿರುವ ಕುರಿತಾಗಿ ಸಭೆಯಲ್ಲಿ ವ್ಯಾಪಕ ಆಕ್ಷೇಪ ಕೇಳಿ ಬಂದಿತು.
ತಹಶೀಲ್ದಾರ್ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಸಮ್ಮುಖದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಸುನಂದಾ ಯಂಪೂರೆ, ರಾಜೂ ಗುಬ್ಬೇವಾಡ, ಅಂಬರೀಶ ಚೌಗಲೆ, ಖಾಜೂ ಬಂಕಲಗಿ, ಸದಾಶಿವ ಕಬಾಡೆ, ರವಿ ಕಟಕೆ ಹಾಗೂ ಉಪತಹಶೀಲ್ದಾರ ಜಿ.ಎಸ್.ರೋಡಗಿರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.