ಸಿಂದಗಿ: ಜಾತ್ಯತೀತ ವ್ಯಕ್ತಿ, ಮತಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುವ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಹಾಲುಮತ ಸಮುದಾಯ ಬೆಂಬಲಿಸುತ್ತದೆ ಎಂದು ಹಾಲುಮತ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಣ್ಣ ಬಿರಾದಾರ ಹೇಳಿದರು.

ತಾಲ್ಲೂಕಿನ ಗೊರವಗುಂಡಗಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಚುನಾವಣಾ ಪ್ರಚಾರ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ತಳವಾರ ಸಮುದಾಯದ ಮುಖಂಡ ಮಡಿವಾಳ ನಾಟೀಕಾರ ಮಾತನಾಡಿ, ತಳವಾರ ಪರಿವಾರ ಸಮುದಾಯದ ಬೇಡಿಕೆಗೆ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಎಸ್.ಟಿ ಜಾತಿ ಪ್ರಮಾಣಪತ್ರ ನೀಡಲು ಸರ್ಕಾರದ ಆದೇಶ ಹೊರಡಿಸಲಾಗಿದೆ. ಉಪಕಾರ ಸ್ಮರಣೆಗಾಗಿ ನಮ್ಮ ಸಮುದಾಯ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಮುಖಂಡ ಎನ್.ಎಸ್.ಹಿರೇಮಠ ವಕೀಲ, ಸಂಗಣ್ಣ ಕಕ್ಕಳಮೇಲಿ, ಸಿದ್ದು ಯರಗಲ್, ಜಗನ್ನಾಥ, ಪರಶು ಮಾದರ, ಯಮನಪ್ಪ ಬಿರಾದಾರ, ಮಂಜೂ ನಾಟಿಕಾರ, ಶಿವಾನಂದ ನಾಟೀಕಾರ, ಹಣಮಂತ್ರಾಯ ಬಿರಾದಾರ, ನಾನಾಗೌಡ ಬಿರಾದಾರ, ಮಲ್ಲೂ ಕಕ್ಕಳಮೇಲಿ ಸೇರಿದಂತೆ ಅನೇಕರು ಇದ್ದರು.

ಬಿಜೆಪಿ ಅಭ್ಯರ್ಥಿ ಭೂಸನೂರ ಅವರಿಗೆ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರಕಿತು. ನಂತರ ಅಭ್ಯರ್ಥಿ ಬೆಂಬಲಿಗರೊಂದಿಗೆ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.