ಸಿಂದಗಿ: ಮತಕ್ಷೇತ್ರದ ಶಾಸಕರು ಪುರಸಭೆಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅದೇ ರೀತಿ ಶಾಸಕರ ಸಹೋದರ ಡಾ.ಮುತ್ತು ಮನಗೂಳಿ ಕೂಡ ಪುರಸಭೆ ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಆರೋಪಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಪುರಸಭೆಯ ₹80 ಲಕ್ಷ ಅನುದಾನವನ್ನು ತನ್ನ ಸಂಬಂಧಿ ಸದಸ್ಯರ ವಾರ್ಡ್‌ಗೆ ಮೀಸಲಿರಿಸಿದ್ದಾರೆ. ಹಿಂದಿನ ಶಾಸಕರು ಆಯ್ಕೆ ಮಾಡಿರುವ ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿ ತಮಗೆ ಬೇಕಾದವರ ಹೆಸರು ಸೇರ್ಪಡೆ ಮಾಡಿದ್ದಾರೆ’ ಎಂದು ಅವರು ದೂರಿದರು.

ಶಾಸಕರು ಪುರಸಭೆ 23 ವಾರ್ಡ್‌ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗಿ. ಇಲ್ಲಿಯ ಪುರಸಭೆಯನ್ನು ನಗರಸಭೆಯನ್ನಾಗಿ ಮಾರ್ಪಾಡು ಮಾಡುವಲ್ಲಿ ಶಾಸಕರು ಹೆಚ್ಚಿನ ಮುತವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್ ರಾಜ್ಯ ಘಟಕದ ಪ್ರಮುಖ ಪ್ರಕಾಶ ಹಿರೇಕುರುಬರ ಮಾತನಾಡಿ, ಸಿಂದಗಿ ಜಿಲ್ಲೆಯನ್ನಾಗಿ ರಚನೆ ಮಾಡುವ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಸಿಂದಗಿ ಪಟ್ಟಣದ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಪಟ್ಟಣದ ರಸ್ತೆಗಳೆಲ್ಲ ದೂಳುಮಯವಾಗಿವೆ. ಇಲ್ಲಿ ಸಂಚಾರಿ ವ್ಯವಸ್ಥೆ ಅವ್ಯವಸ್ಥೆ ಆಗರವಾಗಿದೆ ಎಂದು ದೂರಿದರು.

ಜೆಡಿಎಸ್ ಮುಖಂಡ ಎಂ.ಎನ್.ಪಾಟೀಲ ತಾಲ್ಲೂಕಿನಲ್ಲಿ ಜೆಡಿಎಸ್ ಸಂಘಟನೆ ಶೂನ್ಯ ಸ್ಥಿತಿಯಲ್ಲಿದೆ ಎಂದು ವಿಷಾದಿಸಿದರು.

ಜಿಲ್ಲೆಯಲ್ಲಿ ಸಿಂದಗಿ ಪಟ್ಟಣ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇಲ್ಲಿಯ ಗೋಲಗೇರಿ ರಸ್ತೆ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಭಿವೃದ್ಧಿ ಮಾಡಬೇಕಾದ ಎಲ್ಲ ಶಾಸಕರು ಲೂಟಿ ಹೊಡೆಯುವ ಕೆಲಸ ಮಾತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಇಲ್ಲಿಯ ಪುರಸಭೆ ಆಡಳಿತ ನಿಷ್ಕ್ರೀಯವಾಗಿದೆ. ಸರ್ಕಾರದ ಆಶ್ರಯ ಯೋಜನೆ ನಿವೇಶನಗಳು ನಿರ್ಗತಿಕರಿಗೆ ತಲುಪುತ್ತಿಲ್ಲ ಎಂದರು.

ಪುರಸಭೆ ಸದಸ್ಯ ಶರಣಗೌಡ ಪಾಟೀಲ ಹಾಗೂ ಜೆಡಿಎಸ್ ಮುಖಂಡ ಪ್ರಕಾಶ ಕೋರಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.