ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ‘ಮುನ್ನುಡಿ’

Published : 18 ಡಿಸೆಂಬರ್ 2023, 7:44 IST
Last Updated : 18 ಡಿಸೆಂಬರ್ 2023, 7:44 IST
ಫಾಲೋ ಮಾಡಿ
Comments
ಸಿಂದಗಿಗೆ ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ. ದೇವಹಿಪ್ಪರಗಿ ಆಲಮೇಲ ಇಂಡಿ ಚಡಚಣ ತಾಲ್ಲೂಕುಗಳಿಗೆ ಮಧ್ಯದಲ್ಲಿರುವ ತಾಲ್ಲೂಕು ಸಿಂದಗಿ ಆಗಿದೆ. ಈಗಾಗಲೇ ನಮ್ಮ ಕ್ಷೇತ್ರದ ಜನತೆ ಹೋರಾಟಗಾರರ ಒತ್ತಡವೂ ಹೆಚ್ಚಿದೆ. ಹೀಗಾಗಿ ಸಿಂದಗಿ ಜಿಲ್ಲೆಯಾಗುವುದೇ ಸೂಕ್ತ
–ಅಶೋಕ ಮನಗೂಳಿ ಶಾಸಕ ಸಿಂದಗಿ
ದೇವರಹಿಪ್ಪರಗಿ ಕ್ಷೇತ್ರದ ವಿವಿಧ ಗ್ರಾಮಗಳ ಪ್ರಮುಖರು ಹಾಗೂ ಜನತೆಯ ಅಭಿಪ್ರಾಯದಂತೆ ಜಿಲ್ಲಾ ಕೇಂದ್ರ ಈಗಿರುವುದೇ ಒಳ್ಳೆಯದು. ಏಕೆಂದರೆ ಆಡಳಿತದ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಸ್ಥಳ ವಿಜಯಪುರವೇ ನಮಗೆ ಅತ್ಯಂತ ಹತ್ತಿರವಾಗಿದೆ.
–ರಾಜುಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ 
ಜಿಲ್ಲೆ ವಿಭಜನೆ ಈಗಿನ ಸಮಯದಲ್ಲಿ ಅಷ್ಟೊಂದು ಸೂಕ್ತ ನಿರ್ಧಾರವಾಗಲಾರದು. ಜಿಲ್ಲಾ ಕೇಂದ್ರ ಆಗಬೇಕಿದ್ದರೆ ಮುದ್ದೇಬಿಹಾಳ ಆಗಬೇಕು. ಹೀಗಾಗಿ ನಾನು ಮುದ್ದೇಬಿಹಾಳವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸುವೆ 
-ಸಿ.ಎಸ್.ನಾಡಗೌಡ ಅಪ್ಪಾಜಿ ಶಾಸಕ ಮುದ್ದೇಬಿಹಾಳ
ಕೈಜೋಡಿಸಲು ಜನರಿಗೆ ಮನವಿ
ವಿಜಯಪುರ: ಸಿಂದಗಿ ಆಲಮೇಲೆ ದೇವರಹಿಪ್ಪರಗಿ ಮತ್ತು ಚಡಚಣ ಭಾಗದ ಜನರು ಮತ್ತು ಜನಪ್ರತಿನಿಧಿಗಳು ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಕೈಜೋಡಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಜಿಲ್ಲಾ ಕೇಂದ್ರ ರಾಜಧಾನಿಯಿಂದ ದೂರ ಇರುವುದರಿಂದ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಅಭಿವೃದ್ಧಿಯಿಂದ ಬಹಳಷ್ಟು ವಂಚಿತವಾಗಿದ್ದೇವೆ. ಸತತ ಬರ ಪೀಡಿತ ಪ್ರದೇಶವಾಗಿದೆ. ಅಲ್ಲದೇ ಭೀಮಾ ತೀರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು. ಇದನೆಲ್ಲ ನಿಯಂತ್ರಿಸಿ ಅಭಿವೃದ್ಧಿಯತ್ತ ನಮ್ಮ ಪ್ರದೇಶ ಕೊಂಡೊಯ್ಯಲು ಪ್ರತ್ಯೇಕ ಜಿಲ್ಲೆ ರಚನೆಯಾಗುವುದು ಸೂಕ್ತ ಎಂದರು.  ಜಿಲ್ಲೆಯಾಗುವ ಎಲ್ಲ ಅರ್ಹತೆ ಇಂಡಿಗೆ ಇದೆ. ತಾಲ್ಲೂಕಿನಲ್ಲಿ 74 ಹಳ್ಳಿ ಇವೆ. ರೈಲ್ವೆ ಬ್ರಾಡ್‌ಗೇಜ್‌ ಇದೆ ಎರಡು ರಾಷ್ಟ್ರೀಯ ಹೆದ್ದಾರಿ ಇವೆ ಮೂಲಸೌಲಭ್ಯಗಳು ಇವೆ ಕೃಷಿ ವಿಜ್ಞಾನ ಕೇಂದ್ರ ಇದೆ ಸಕ್ಕರೆ ಕಾರ್ಖಾನೆ ಇವೆ ಲಿಂಬೆ ಅಭಿವೃದ್ಧಿ ಪ್ರಾಧಿಕಾರ ಇದೆ ಕೈಗಾರಿಕಾ ಪ್ರದೇಶ ಇದೆ. ಮಿನಿ ವಿಧಾನಸೌಧ ತಾಲ್ಲೂಕು ಆಸ್ಪತ್ರೆ ಕ್ರೀಡಾಂಗಣ ಇದೆ. ಜಿಲ್ಲೆಯಾಗಲು ಯಾವುದೇ ಕೊರತೆ ಇಲ್ಲ ಎಂದರು. ಈ ಮೊದಲು ನಮ್ಮ ಜಿಲ್ಲೆಯೂ 371 ಜೆ ಗೆ ಸೇರ್ಪಡೆಯಾಗಿದ್ದರೆ ನಮ್ಮ ಭಾಗಕ್ಕೆ ಅನುಕೂಲವಾಗುತ್ತಿತ್ತು. ಆದರೆ ಸಾಧ್ಯವಾಗಿಲ್ಲ. ಈಗಲಾದರೂ ಸೇರ್ಪಡೆಯಾದರೆ ನಮ್ಮ ಭಾಗದ ಮಕ್ಕಳ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT