ಕೆಂಭಾವಿ: ಪಟ್ಟಣದ ಉಪ್ಪಿನ ಮಾಳಿ ಸರ್ಕಾರಿ ಜಮೀನು ಸರ್ವೆ ನಂ.409ರಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದ ವಾರ್ಡ್ ನಂ.1 ಮತ್ತು 2ರ ನಿವಾಸಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸೋಮವಾರ ಸುರಪುರ ತಹಸೀಲ್ದಾರ ನಿಂಗಣ್ಣ ಬಿರೇದಾರ ಅವರು ಹಕ್ಕು ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 2016-17ರಲ್ಲಿ ಇಲ್ಲಿನ ನಿವಾಸಿಗಳು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಒಟ್ಟು 49 ಫಲಾನುಭವಿಗಳಿಗೆ ತಲಾ 20*30 ಜಾಗವನ್ನು ಮನೆ ನಿರ್ಮಿಸಿಕೊಳ್ಳಲು ಹಕ್ಕುಪತ್ರ ನೀಡಲಾಗಿದೆ. ನಿವೇಶನ ಶುಲ್ಕ ₹2,500 ಚಲನ್ ಮೂಲಕ ಪಡೆಯಲಾಗಿದೆ ಎಂದರು.

ನಿವೇಶನಗಳನ್ನು ವಾಸಕ್ಕೆ ಮಾತ್ರ ಬಳಸಬೇಕು. ಬಾಡಿಗೆ ಅಥವಾ ಇತರ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು ಕಾನೂನು ಬಾಹಿರವಾಗಿರುತ್ತದೆ ಎಂದು ತಿಳಿಸಿದರು.

ಉಪ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ, ಕಂದಾಯ ನಿರಿಕ್ಷಕ ರಾಜಾಸಾಬ್ ಕಂದಗಲ್, ಗ್ರಾಮಲೆಕ್ಕಿಗ ಲಕ್ಷ್ಮಣ, ಸಂಜೀವರಾವ್ ಕುಲ್ಕರ್ಣಿ, ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.