ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು, 2000 ಪರವಾನಗಿ ಭೂಮಾಪಕರ ನೇಮಕಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಫೆಬ್ರುವರಿ 2 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇದೇ 20ನೇ ತಾರೀಖು ಅರ್ಜಿ ಸಲ್ಲಿಕೆಗೆ ಕೊನೆ ದಿನ. ಅಂದು ಸಂಜೆ 5ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. www.*andrecords.karnataka.gov.in/service201 ಈ ಜಾಲತಾಣದ ಮೂಲಕವೇ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಮೇಲಿನ ಜಾಲತಾಣಕ್ಕೆ ಭೇಟಿ ನೀಡಿ. ಅಲ್ಲಿ ಅಭ್ಯರ್ಥಿಯ ಮೊಬೈಲ್ ಸಂಖ್ಯೆ ನಮೂದಿಸಬೇಕು. ನಂತರ CAPTCHA ದಾಖಲಿಸಬೇಕು. ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಬರುತ್ತದೆ. ಅದನ್ನು ಜಾಲತಾಣದಲ್ಲಿ ಸೂಚಿಸಿರುವ ಸ್ಥಳದಲ್ಲಿ ದಾಖಲಿಸಿ, 'submit' ಗುಂಡಿ ಒತ್ತಿ. ನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಅರ್ಜಿದಾರರ ಉಳಿದ ವಿವರಗಳನ್ನು ದಾಖಲಿಸಬೇಕು.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 65 ವರ್ಷ

ಅರ್ಜಿ ಶುಲ್ಕ: ₹1000. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಅರ್ಜಿ ಭರ್ತಿ ಮಾಡಿ, ಶುಲ್ಕ ಪಾವತಿಸಿದ ನಂತರ, Submit ಬಟನ್ ಒತ್ತಿದ ಮೇಲೆ ಕಂಪ್ಯೂಟರ್ ಪರದೆಯ ಮೇಲೆ ಸ್ವೀಕೃತಿ ಪತ್ರ ಮೂಡುತ್ತದೆ. ಅದನ್ನು ಪ್ರಿಂಟ್ ತೆಗೆದುಕೊಂಡು, ಅದರಲ್ಲಿರುವ ಅರ್ಜಿ ಸಂಖ್ಯೆ(App*ication ID)ಯನ್ನು ಇಲಾಖೆಯೊಂದಿಗೆ ವ್ಯವಹರಿಸುವಾಗ ಬಳಸಬೇಕು.

ಶೈಕ್ಷಣಿಕ ಅರ್ಹತೆಗಳು

* ಕನಿಷ್ಠ ಪದವಿ ಪೂರ್ವ ಶಿಕ್ಷಣ(ಪಿಯುಸಿ) ಅಥವಾ ಸಿಬಿಎಸ್ಇ ಅಥವಾ ಐಸಿಎಸ್ಇ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ವಿಜ್ಞಾನ ವಿಷಯದ ಕಾಂಬಿನೇಷನ್ ಕೋರ್ಸ್ ತೆಗೆದುಕೊಂಡು, ಅದರಲ್ಲಿ ಗಣಿತ ವಿಷಯದಲ್ಲಿ ಶೇಕಡ 60 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ

* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬಿಇ /ಬಿ.ಟೆಕ್ ಸಿವಿಲ್ ಪದವಿ ಅಥವಾ ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಾಸ್ ಮಾಡಿರಬೇಕು.

* ವೃತ್ತಿ ಶಿಕ್ಷಣ ಇಲಾಖೆ ನಡೆಸುವ ‘ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯಲ್ಲಿ ಪದವಿ ಪೂರ್ವ ಡಿಪ್ಲೊಮಾ ಪಾಸ್ ಮಾಡಿರಬೇಕು. ಅಥವಾ

*ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಸರ್ವೆ ಟ್ರೇಡ್ ವಿಷಯದಲ್ಲಿ ಐಟಿಐ ಪಾಸಾಗಿರಬೇಕು. ಅಥವಾ

*ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಅರ್ಜಿ ಸಲ್ಲಿಸಬಹುದು.

ಸ್ಪರ್ಧಾತ್ಮಕ ಪರೀಕ್ಷೆ: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ವಿಷಯಗಳ ಲಿಖಿತ ಪರೀಕ್ಷೆ ನಡೆಯುತ್ತದೆ. ಎಸ್ಸೆಸ್ಸೆಲ್ಸಿ ಜ್ಞಾನಮಟ್ಟಕ್ಕೆ ಹೊಂದುವಂತಹ ಪ್ರಶ್ನೆಗಳಿ ರುತ್ತವೆ. ಪರೀಕ್ಷೆಯಲ್ಲಿ ತಲಾ ಒಂದು ವಿಷಯಕ್ಕೆ 100 ಅಂಕಗಳಿಗೆ ವಸ್ತು ನಿಷ್ಠ ಮಾದರಿ(Objective Mu*tip*e Choice) ಪ್ರಶ್ನೆಗಳನ್ನೊಳಗೊಂಡಂತೆ, ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ನಿಗದಿತ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ‘ಆನ್ಲೈನ್ ಪರೀಕ್ಷೆ’ ಅಥವಾ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಪತ್ರಿಕೆ –1(ಸಾಮಾನ್ಯ ಪತ್ರಿಕೆ): ಇದು ಎರಡು ಗಂಟೆಯ ಅವಧಿಯ ಪರೀಕ್ಷೆ. ಒಟ್ಟು 100 ಅಂಕಗಳಿರುತ್ತವೆ. ಈ ಪತ್ರಿಕೆ ಯಲ್ಲಿ ಕರ್ನಾಟಕ ಹಾಗೂ ಭಾರತದ ಇತಿಹಾಸ, ರಾಜ್ಯಶಾಸ್ತ್ರ, ಸಾಮಾನ್ಯ ಜ್ಞಾನ ಮತ್ತು ಇತ್ತೀಚಿನ ವಿದ್ಯಮಾನಗಳ ಅರಿವು, ಸಾಮಾನ್ಯ ವಿಜ್ಞಾನ ಹಾಗೂ ನಿತ್ಯದ ವಿದ್ಯಮಾನಗಳು ಮತ್ತು ಪ್ರಾಯೋಗಿಕ ಜ್ಞಾನ ಕುರಿತು ಪ್ರಶ್ನೆಗಳಿರುತ್ತವೆ.

ಪತ್ರಿಕೆ –2 (ನಿರ್ದಿಷ್ಟ ಪತ್ರಿಕೆ): ಒಟ್ಟು 100 ಅಂಕಗಳ, 2 ಗಂಟೆ ಕಾಲಾವಧಿಯ ಪರೀಕ್ಷೆ. ಈ ಪತ್ರಿಕೆಯ ಕುರಿತು ಭೂಮಾಪನ ಇಲಾಖೆ ಜಾಲತಾಣ https://*andrecords.karnataka.gov.in/service201/ ಅನುಬಂಧ– 2ನ್ನು ನೋಡುವುದು.

ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಯಾವುದೇ ಸಂದರ್ಶನ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ತರಬೇತಿ ನೀಡಿ, ಇದರಲ್ಲಿ ಉತ್ತೀರ್ಣರಾದವರಿಗೆ ಪರವಾನಗಿ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.