ಜೀವವರ್ಗೀಕರಣ ವಿಜ್ಞಾನಿಗಳು, ಜೀವವೈವಿಧ್ಯ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು, ಕೃಷಿ ವಿದ್ಯಾರ್ಥಿಗಳು, ಜೀವಿ ವೈವಿಧ್ಯ ಸಂರಕ್ಷಕರು ಮತ್ತು ಸೋಂಕುಗಳನ್ನು ನಿವಾರಿಸುವ ತಜ್ಞರಿಗೆ ಮಾಹಿತಿ ನೀಡುವ ಮತ್ತು ಕಲಿಕೆಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ತಂತ್ರಾಂಶಗಳನ್ನು ಲೂಸಿಡ್ ಮೊಬೈಲ್ ಕಂಪನಿ ಅಭಿವೃದ್ಧಿಪಡಿಸುತ್ತದೆ.

ಇವು ಜೀವವೈವಿಧ್ಯತೆಯನ್ನು ಗುರುತಿಸುವವರಿಗೆ ಮತ್ತು ರೋಗನಿರ್ಣಯದ ಕಾರ್ಯದಲ್ಲಿ ತೊಡಗಿರುವವರಿಗೆ ಸಹಾಯ ಮಾಡುವ ಉಪಯುಕ್ತ ಸಾಧನಗಳಾಗಿವೆ. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇವು ಉಪಯುಕ್ತವಾಗಿವೆ.

ಜೀವವೈವಿಧ್ಯತೆ ಗುರುತಿಸುವ ಮತ್ತು ರೋಗ ತಗುಲಿದ ಜೀವಿ ಮತ್ತು ಸಸ್ಯದ ಮೇಲೆ ನಿಗಾ ವಹಿಸಿ ಸೋಂಕು ಹರಡದಂತೆ ಮಾಡಲು ಸಲಹೆ ಸೂಚನೆಗಳನ್ನು ನೀಡುವ ಸಾಧನಗಳಾಗಿ ಇವನ್ನು ಬಳಸಲಾಗುತ್ತದೆ. ವಿಷಯಗಳನ್ನು ಸುಲಭವಾಗಿ ಹುಡುಕಲು ಮ್ಯಾಟ್ರಿಕ್ಸ್ ಕೀ ಅಳವಡಿಸಲಾಗಿದ್ದು, ಇಲ್ಲಿನ ಮಾಹಿತಿ ಡೌನ್ಲೋಡ್ ಮಾಡಿಕೊಂಡು ಇತರರೊಂದಿಗೆ ಹಂಚಿಕೊಳ್ಳಬಹುದು. ಉಪಯುಕ್ತವಾದ ಕೆಲವು ಆ್ಯಪ್ಗಳ ಕುರಿತು ನೋಡೋಣ.

Insect Orders: ಕೀಟಗಳ ವೈವಿಧ್ಯತೆಯನ್ನು ತಿಳಿಯಲು ಮತ್ತು ಅವುಗಳ ಮಾಹಿತಿಯನ್ನು ಪಡೆಯಲು ನೆರವಾಗುವ ಆ್ಯಪ್. ಕೋಟ್ಯಂತರ ಕೀಟ ಪ್ರಭೇದಗಳುಭೂಮಿಯ ಮೇಲೆ ವಾಸಿಸುತ್ತಿವೆ. ಅವುಗಳ ಜೈವಿಕ ಲಕ್ಷಣಗಳು ಮತ್ತು ರಚನಾತ್ಮಕ ಲಕ್ಷಣಗಳ ಮಾಹಿತಿಯನ್ನು ಇದರಿಂದ ಪಡೆಯಬಹುದು. ಕೀಟಗಳ ಜೀವವಿಜ್ಞಾನ, ನಡವಳಿಕೆ ಮತ್ತು ವಾಸ, ಪರಿಸರ, ಯಾವ ಕೀಟ ಯಾವ ವರ್ಗಕ್ಕೆ ಸೇರಿದೆ ಎಂಬುದನ್ನು ತಿಳಿಯಬಹುದು. ರೆಕ್ಕೆಯಿರದ ಚಿಕ್ಕ ಕೀಟಗಳ ಮಾಹಿತಿಯನ್ನೂ ಒದಗಿಸುತ್ತದೆ. ಕೀಟವಿಜ್ಞಾನ ಅಧ್ಯಯನ ಕೈಗೊಂಡವರಿಗೆ ಮತ್ತು ಕೀಟಗಳ ಬಗ್ಗೆ ಆಸಕ್ತಿ ಹೊಂದಿದವರಿಗೆ ಇದು ಉಪಯುಕ್ತ.

Terrestrial Mollusc Key: ಮೃದ್ವಂಗಿಗಳ ಬಗ್ಗೆ ಮಾಹಿತಿ ನೀಡುವ ಆ್ಯಪ್. ಕೃಷಿಯಲ್ಲಿ ಬಸವನಹುಳುಗಳ ಪ್ರಾಮುಖ್ಯತೆಯನ್ನು ತಿಳಿಯಲು ಇದು ಉಪಯುಕ್ತ. ಜೊತೆಗೆ ಅಮೆರಿಕದಲ್ಲಿನ ಮೃದ್ವಂಗಿ ಪ್ರಭೇದಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಮೃದ್ವಂಗಿಗಳನ್ನು ಸುಲಭವಾಗಿ ಗುರುತಿಸಲು ಅವುಗಳ ಚಿತ್ರಗಳನ್ನೂ ಅಳವಡಿಸಲಾಗಿದೆ.

Aquarium & Pond Plant ID: ಅಕ್ವೇರಿಯಂ ಮತ್ತು ಸರೋವರಗಳಲ್ಲಿ ಬೆಳೆಯುವ ಸಸ್ಯಗಳ ಕುರಿತು ಮಾಹಿತಿ ನೀಡುವ ಉಪಯುಕ್ತ ಆ್ಯಪ್. ಸಿಹಿನೀರಿನಲ್ಲಿ ಬೆಳೆಯುವ ಸಸ್ಯಗಳು ಮತ್ತು ತೇವಾಂಶದಲ್ಲಿ ಬೆಳೆಯುವ ಸಸ್ಯಗಳ ಕುರಿತು ಉಪಯುಕ್ತ ಮಾಹಿತಿಯ ಜೊತೆಗೆ ಅವುಗಳನ್ನು ಬೆಳೆಯುವ ವಿಧಾನ, ಅವುಗಳ ಮಾರುಕಟ್ಟೆ, ಸಸ್ಯಗಳ ವಿಧಗಳು, ಜಾತಿ ಮತ್ತು ಅಕ್ವೇರಿಯಂನಲ್ಲಿ ಬೆಳೆಸುವುದರಿಂದ ಪರಿಸರದ ಮೇಲೆ ಆಗುವ ಪ್ರಭಾವ ಮತ್ತು ಪರಿಣಾಮಗಳನ್ನು ತಿಳಿಸುತ್ತದೆ. ಅಕ್ವೇರಿಯಂ ಮತ್ತು ಕೆರೆಗಳಲ್ಲಿ ಬೆಳೆಯುವ ಸಸ್ಯಗಳ ರೋಗಗಳು ಹಾಗೂ ಅದನ್ನು ತಡೆಯುವ ವಿಧಾನವನ್ನೂ ತಿಳಿಯಬಹುದು.

Dried Botanicals Key: ಒಣಗಿದ ಸಸ್ಯಗಳಿಂದ ಆಲಂಕಾರಿಕ ಮತ್ತು ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ಮಾಹಿತಿ ನೀಡುವ ಆ್ಯಪ್. ಯಾವ ಸಸ್ಯಗಳಿಂದ ಯಾವ ರೀತಿ ಆಲಂಕಾರಿಕ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಸಸ್ಯಗಳಷ್ಟೇ ಅಲ್ಲದೆ, ಕೆಲವು ಹಣ್ಣುಗಳು, ಎಲೆಗಳು ಮತ್ತು ವಿವಿಧ ಬೀಜಗಳಿಂದ ಕರಕುಶಲ ವಸ್ತುಗಳನ್ನು ಹೇಗೆ ತಯಾರಿಸಬೇಕು ಎಂಬುದನ್ನೂ ತಿಳಿಸುತ್ತದೆ.

ಲೂಸಿಡ್ ಮೊಬೈಲ್ ಕಂಪನಿಯು ಸಸ್ಯವಿಜ್ಞಾನ, ಜೀವವಿಜ್ಞಾನ ಮತ್ತು ಕೃಷಿಗೆ ಸಂಬಂಧಸಿದ ಕೆಲವು ಉಪಯುಕ್ತ ಆ್ಪಪ್ಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳನ್ನು ಕಲಿಕೆಗೆ ಪೂರಕವಾಗಿ ಬಳಸಬಹುದು.

ಹೆಚ್ಚಿನ ಮಾಹಿತಿಗೆ ಮತ್ತು ಕಲಿಕೆಗೆ http://www.lucidcentral.org ಎಂಬ ಜಾಲತಾಣಕ್ಕೆ ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.