ಪಿಯುಸಿ ಹಾಗೂ ಪದವಿ ವಿಭಾಗಗಳ ಕಲಾ ತರಗತಿಗಳು ಇತ್ತೀಚೆಗೆ ವಿದ್ಯಾರ್ಥಿಗಳಿಲ್ಲದೆ ಬಣಗುಡುತ್ತಿರುವುದು ವಿಪರ್ಯಾಸದ ಸಂಗತಿ. ಇದನ್ನು ಅವಲೋಕಿಸಿದಾಗ ಏಕೆ ಕಲಾ ವಿಭಾಗಗಳು ಇತರ ವಿಭಾಗಗಳಂತೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿಲ್ಲ ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೆ ಉತ್ತರ ಹುಡುಕುತ್ತ ಹೊರಟರೆ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ಬಗ್ಗೆ ಹೆಚ್ಚಿರುವ ವ್ಯಾಮೋಹ ಮುಖ್ಯವಾಗಿ ಗೋಚರಿಸುತ್ತದೆ. ಕಲಾ ವಿಷಯವನ್ನು ಓದಿದರೆ ಸಾಕಷ್ಟು ಉದ್ಯೋಗ ಅವಕಾಶಗಳಿಲ್ಲ ಎಂಬ ತಪ್ಪು ಕಲ್ಪನೆ ಅವರಲ್ಲಿ ಆಳವಾಗಿ ಬೇರೂರಿದೆ.

ಕಲಾ ವಿಭಾಗದ ಕೋರ್ಸ್ಗಳಲ್ಲಿ ಆಸಕ್ತಿ ಹುಟ್ಟುವಂತೆ ಮಾಡಬೇಕಾದರೆ ಮೊದಲು ವಿದ್ಯಾರ್ಥಿಗಳಲ್ಲಿರುವ ಗೊಂದಲಗಳನ್ನು ನಿವಾರಿಸಬೇಕಾದ ಅಗತ್ಯವಿದೆ. ‘ನಾವು ಮುಂದೇನು ಮಾಡಬೇಕು? ನಾವು ಬಯಸಿದಂತಹ ಉದ್ಯೋಗ ಅವಕಾಶಗಳು ಕೈಗೆಟಕುತ್ತವೆಯೇ?’ ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಿ ಅವರಲ್ಲಿ ಧೈರ್ಯವನ್ನು ತುಂಬಬೇಕು.

ವಿದ್ಯಾರ್ಥಿಗಳು ಕೋರ್ಸ್ ಸಂಯೋಜನೆ ಆಯ್ಕೆ ಸಂದರ್ಭದಲ್ಲಿ ಕಲಾ ಪದವಿ ಸುಲಭ ಎಂಬ ಧೋರಣೆಯನ್ನು ಬಿಟ್ಟು, ದೂರಗಾಮಿ ಚಿಂತನೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಹಿಂದೆ ಈಗಿನಷ್ಟು ವೈವಿಧ್ಯಮಯ ಅವಕಾಶಗಳು ಇರಲಿಲ್ಲ. ಹತ್ತನೇ ತರಗತಿಯ ನಂತರ ಪಿಯುಸಿ, ಪದವಿ, ಬಿ.ಎಡ್., ಎಂ.ಎ. ಹೀಗೆ ಸೀಮಿತ ಅವಕಾಶಗಳಷ್ಟೇ ಇದ್ದವು. ಆದರೆ ಇತ್ತೀಚೆಗೆ ಕಾನೂನು, ತಾಂತ್ರಿಕ ಪದವಿ, ಮಾಧ್ಯಮ ಕ್ಷೇತ್ರ, ನರ್ಸಿಂಗ್ ಕೋರ್ಸ್ಗಳು, ಸಾಮಾಜಿಕ ಸೇವೆ.. ಹೀಗೆ ಕಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಹೆಜ್ಜೆ ಹೆಜ್ಜೆಗೂ ಅವಕಾಶಗಳ ಮಹಾಪೂರವೇ ಇದೆ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮುನ್ನ ಅಂತರ್ಜಾಲದ ಮೂಲಕ ಮಾಹಿತಿ ಪಡೆಯಬಹುದು. ಜೊತೆಗೆ ಪೋಷಕರು, ಶಿಕ್ಷಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬಹುದು.

ಕೋರ್ಸ್ಗಳು ಹಲವಾರು
ಬಿ.ಎ. ನಂತರ ಬಿ.ಎಡ್. ಶಿಕ್ಷಣ ಪಡೆದು ಶಿಕ್ಷಕ ವೃತ್ತಿಗೆ ಆಯ್ಕೆಯಾಗಬಹುದು. ಇದರ ಜೊತೆಗೆ ಸೈಕಾಲಜಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಸೇವೆ, ಲೈಬ್ರೈರಿ ಸೈನ್ಸ್, ಟ್ರಾವೆಲ್ ಮತ್ತು ಟೂರಿಸಂ ಮುಂತಾದ ವಿಷಯಗಳಿದ್ದು ಇವುಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದು ಅಥವಾ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಲಾ ವಿಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮ ಎಂಬ ಕೀಳರಿಮೆ ಬೇಡ. ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಬಹುದು. ಕನ್ನಡದಲ್ಲೇ ಬರೆದು ಪರೀಕ್ಷೆ ಪಾಸಾದವರು ಸಾಕಷ್ಟು ಜನರಿದ್ದಾರೆ. ಐಎಎಸ್ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಇರುವುದರಿಂದ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಇಂಗ್ಲಿಷ್ ಜ್ಞಾನವಿದ್ದರೆ ಕನ್ನಡದಲ್ಲಿ ಪರೀಕ್ಷೆ ಬರೆದು ಯಶಸ್ಸು ಗಳಿಸಬಹುದು.

ಪತ್ರಿಕೋದ್ಯಮ, ಫೋಟೊ ಜರ್ನಲಿಸಂ, ಫ್ಯಾಷನ್ ಡಿಸೈನಿಂಗ್, ಆಹಾರ ಸಂಸ್ಕರಣ.. ಹೀಗೆ ವೈವಿಧ್ಯಮಯ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿವೆ.

ದೃಶ್ಯ ಮಾಧ್ಯಮಗಳಲ್ಲಿ ದೊರೆಯುವ ವಿಪುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ವೆಬ್ ಡಿಸೈನಿಂಗ್, ಅನಿಮೇಷನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆನಿಮೇಷನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬ ಸಂಬಳ ಪಡೆಯುತ್ತಿರುವುದು ಆ ಕ್ಷೇತ್ರದ ಕಡೆಗೆ ಒಲವು ಹೆಚ್ಚಿಸಿದೆ. ಈ ಎಲ್ಲ ವೈವಿಧ್ಯಮಯ ಕೋರ್ಸ್ಗಳನ್ನು ಕಲಾ ವಿಭಾಗದ ವಿದ್ಯಾರ್ಥಿಗಳು ಕೂಡ ಮಾಡಬಹುದು.

ಚಿತ್ರಕಲೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಕನಿಷ್ಠ ವಿದ್ಯಾರ್ಹತೆ ಪಿಯುಸಿ. ನಂತರ ಮೂರು ವರ್ಷಗಳ ಅವಧಿಯ ಬಿ.ವಿ.ಎ. ಕೋರ್ಸ್ ಮಾಡಬಹುದು. ಶಿಲ್ಪಕಲೆ, ಗ್ರಾಫಿಕ್ಸ್, ಅನಿಮೇಷನ್, ಸೆರಾಮಿಕ್ ಆರ್ಟ್ಸ್ನಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರಕಲೆಯ ಮೂಲಕ ಸ್ವತಂತ್ರ ಕಲಾವಿದನಾಗಿ ಕೈ ತುಂಬ ಸಂಪಾದಿಸಬಹುದು.

ಕಲಾ ವಿಭಾಗಗಳಲ್ಲಿ ಅಧ್ಯಯನ ಮಾಡಿದವರು ವೆಬ್ ಡಿಸೈನ್, ಗ್ರಾಫಿಕ್ಸ್ ಅಧ್ಯಯನ ಮಾಡಿದರೆ ಬೇರೆ ಬೇರೆ ವಸ್ತುಗಳ ಡಿಸೈನ್ ಲೋಗೊ ತಯಾರಿಸಲು ಬಹುರಾಷ್ಟ್ರೀಯ ಕಂಪನಿಯಲ್ಲಿ ಅವಕಾಶ ದೊರೆಯುತ್ತದೆ. ಇದಲ್ಲದೆ ಚಿತ್ರಕಲೆ ಅಧ್ಯಯನ ಮಾಡಿದವರು ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು.

ನರ್ಸಿಂಗ್ ಸೇವೆ
ಆಸಕ್ತ ಕಲಾ ವಿಭಾಗದ ವಿದ್ಯಾರ್ಥಿಗಳು ಮೂರು ವರ್ಷ ಅವಧಿಯ ಜಿಎನ್ಎಂ (ಜನರಲ್ ನರ್ಸಿಂಗ್ ಆ್ಯಂಡ್ ಮಿಡ್ವೈಫ್) ಕೋರ್ಸ್ ಮಾಡಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಸೇವೆಯಲ್ಲಿ ತೊಡಗಿಕೊಳ್ಳಬಹುದು. ಇದೇ ಕೋರ್ಸ್ ಆಧಾರದ ಮೇಲೆ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯಬಹುದು.

ಡಿಪ್ಲೊಮಾ/ ಐಟಿಐ ಕೋರ್ಸ್ಗಳು
ಪದವಿ ಕೋರ್ಸ್ಗೆ ಸೇರುವುದು ಇಷ್ಟವಿಲ್ಲದಿದ್ದರೆ ಪಿಯುಸಿ ನಂತರ ಮೂರು ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದು.

ಎರಡು ವರ್ಷಗಳ ಅವಧಿಯ ಐಟಿಐಗಳಲ್ಲಿ ನಾನಾ ತಾಂತ್ರಿಕ ಕೋರ್ಸ್ಗಳು ಲಭ್ಯವಿವೆ. ಕೆಲವಕ್ಕೆ ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣರಾದರೂ ಪ್ರವೇಶ ಪಡೆಯಬಹುದು. ಈ ಕೋರ್ಸ್ಗಳಲ್ಲಿ ಪಾಸಾದವರಿಗೆ ಅಖಿಲ ಭಾರತ ಮಟ್ಟದ ಎನ್ಸಿವಿಟಿ ಸರ್ಟಿಫಿಕೇಟ್ ದೊರೆಯುತ್ತದೆ. ಇತರ ತಾಂತ್ರಿಕ ಕೋರ್ಸ್ಗಳಾದ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್, ರೆಫ್ರಿಜರೇಟರ್, ಏರ್ ಕಂಡಿಶನ್, ಡೀಸೆಲ್ ಮೆಕ್ಯಾನಿಕ್, ಆಟೊ ಎಲೆಕ್ಟ್ರೀಷಿಯನ್ ಇತ್ಯಾದಿ ಕೋರ್ಸ್ಗಳನ್ನು ಅನುದಾನಿತ ಅಥವಾ ಸರ್ಕಾರಿ ಐಟಿಐ ಕೇಂದ್ರಗಳಲ್ಲಿ ಬಹಳ ಕಡಿಮೆ ವೆಚ್ಚದಲ್ಲಿ ಪಡೆಯಬಹದು.

ಸಾಮಾಜಿಕ ಸೇವಾ ಕ್ಷೇತ್ರ
ಕಲಾ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ಮೂರು ವರ್ಷಗಳ ಅವಧಿಯ ಬಿ.ಎಸ್.ಡಬ್ಲ್ಯು. ಕೋರ್ಸ್ ಮಾಡಬಹುದು. ಆಮೇಲೆ ಎರಡು ವರ್ಷ ಅವಧಿಯ ಸ್ನಾತಕೋತ್ತರ ಎಂ.ಎಸ್.ಡಬ್ಲ್ಯು. ಪದವಿ ಪಡೆಯಬಹುದು. ಇದರಲ್ಲಿ ಮುಖ್ಯವಾಗಿ ಎಚ್.ಆರ್. (ಮಾನವ ಸಂಪನ್ಮೂಲ) ಅಥವಾ ಪಿ.ಎಮ್.ಐ.ಆರ್. (ಪರ್ಸನಲ್ ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ರಿಲೇಶನ್ಶಿಪ್), ಎಮ್.ಪಿ.ಎಸ್.ಡಬ್ಲ್ಯೂ. ( ಮೆಡಿಕಲ್ ಆ್ಯಂಡ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್) ಹಾಗೂ ಸಿ.ಡಿ. (ಸಮುದಾಯ ಅಭಿವೃದ್ಧಿ) ಹೀಗೆ ಮೂರು ವಿಶೇಷ ಅಧ್ಯಯನ ಕ್ಷೇತ್ರಗಳಿವೆ. ಇವುಗಳಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪಡೆದು ಕಂಪನಿಗಳಲ್ಲಿ ಸಿಬ್ಬಂದಿ ನೇಮಕಾತಿ, ಸಂಸ್ಥೆಗಳಲ್ಲಿ ಕೌನ್ಸೆಲರ್ ಆಗಿ, ಎನ್ಜಿಒ ವಲಯಗಳಲ್ಲಿ, ಚೈಲ್ಡ್ ಲೈನ್ನಲ್ಲಿ ಪೂರ್ಣ ಪ್ರಮಾಣದ ಉದ್ಯೋಗಗಳಲ್ಲಿ ತೊಡಗಬಹುದು.

(ಲೇಖಕರು ಕಾರ್ಕಳ ಕಾಲೇಜಿನಲ್ಲಿ ಉಪನ್ಯಾಸಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.