ಒಂದೊಂದು ಮಗುವೂ ಮತ್ತೊಂದಕ್ಕಿಂತ ಭಿನ್ನ. ಒಂದು ಮಗು ನೋಡಿ ಕಲಿತರೆ, ಮತ್ತೊಂದು ಕೇಳಿ ಅಥವಾ ಬರೆಯುವುದರಿಂದ ಕಲಿಯಬಹುದು. ಹೀಗಾಗಿ ಸ್ಪೆಲ್ಲಿಂಗ್ ಕಲಿಸುವಾಗ ಮಗುವಿನ ಆಸಕ್ತಿ ಮತ್ತು ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಕಲಿಸುವುದು ಒಳ್ಳೆಯದು.

ಶಾಲೆಗಳಲ್ಲಿ ನಡೆಯುವ ಪೋಷಕರ ಸಭೆ (ಪೇರೆಂಟ್ಸ್ ಮೀಟಿಂಗ್)ಗಳಲ್ಲಿ ಬಹಳಷ್ಟು ಪೋಷಕರು ಶಿಕ್ಷಕರ ಬಳಿ ತೋಡಿಕೊಳ್ಳುವ ಸರ್ವೇ ಸಾಮಾನ್ಯ ಆತಂಕವೆಂದರೆ ‘ಸ್ಪೆಲ್ಲಿಂಗ್ ಸಮಸ್ಯೆ’ ಅಥವಾ ಕಾಗುಣಿತ ಸಮಸ್ಯೆ. ಭಾಷೆ ಯಾವುದೇ ಇರಲಿ, ಸ್ಪೆಲ್ಲಿಂಗ್ ಸಮಸ್ಯೆ ಹಿಂದಿನಿಂದ ಇದ್ದರೂ ಈ ಹತ್ತಿಪ್ಪತ್ತು ವರ್ಷಗಳಲ್ಲಿ ಗಣನೀಯವಾಗಿ ಏರಿದೆ. ಮಾತೃ ಭಾಷೆಗಿಂತ ಇಂಗ್ಲಿಷ್‌ನಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚು. ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸ್ಪೆಲ್ಲಿಂಗ್ ಸಮಸ್ಯೆಯನ್ನು ಬಗೆಹರಿಸಿದರೆ ಮುಂದೆ ಅವರಿಗೆ ಸಂವಹನ ನಡೆಸುವಲ್ಲಾಗಲಿ, ಬರವಣಿಗೆಯಲ್ಲಾಗಲಿ ಮತ್ತು ಓದಿದ್ದನ್ನು ಅರ್ಥೈಸಿಕೊಳ್ಳುವಲ್ಲಾಗಲಿ ಬಹಳ ಸಹಕಾರಿಯಾಗುತ್ತದೆ. ಅದಕ್ಕಾಗಿ ಒಂದಿಷ್ಟು ಸಲಹೆಗಳನ್ನು ನೀವು ಅನುಸರಿಸಬಹುದು.

ಓದುವ ಹವ್ಯಾಸ

ಕಲಿಕೆಗೆ ಸಂಬಂಧಿಸಿದಂತೆ ಬರವಣಿಗೆ ಮತ್ತು ಓದು ಈ ಎರಡರಲ್ಲೂ ಯಾವುದಕ್ಕೆ ಹೆಚ್ಚು ಒತ್ತನ್ನು ಕೊಡಬೇಕು ಎಂದೇನಾದರೂ ಪ್ರಶ್ನೆ ಮಾಡಿದರೆ ಆಯ್ಕೆ ಅಷ್ಟು ಸುಲಭವಲ್ಲ. ಭಾಷಾ ತಜ್ಞರ ಪ್ರಕಾರ ಎರಡೂ ಸಮನಾಗಿ ಒಂದೇ ದೋಣಿಯಲ್ಲಿ ಸಾಗಿದರೆ ಮಾತ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಓದು ಅಥವಾ ಬರವಣಿಗೆ ಯಾವುದೇ ಆದರೂ ತಪ್ಪಿಲ್ಲದೆ ಪದಗಳನ್ನು ರಚಿಸುವುದು ಬಹುಮುಖ್ಯ. ಸ್ಪೆಲ್ಲಿಂಗ್ ತಪ್ಪಾದರೆ ಓದುವಾಗ ಅದರ ಉಚ್ಚಾರ ಕೂಡ ತಪ್ಪಾಗುತ್ತದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿರುವಾಗಲೇ ಮಕ್ಕಳಿಗೆ ಓದುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಕೂಡಿಸಿ ಓದುವುದು, ಪದೇ ಪದೇ ಓದುವುದರಿಂದ ಅಕ್ಷರಗಳು ನೆನಪಿನಲ್ಲಿ ಉಳಿಯುತ್ತವೆ. ಅಪರೂಪಕ್ಕೊಮ್ಮೆ ಓದುವುದಕ್ಕೂ ಮತ್ತು ಆಗಾಗ್ಗೆ ಓದುವುದಕ್ಕೂ ಬಹಳ ವ್ಯತ್ಯಾಸವಿದೆ.

ಸ್ಪೆಲ್ಲಿಂಗ್‌ನ ಜ್ಞಾನ

ಮಕ್ಕಳು ಸಣ್ಣವರಾಗಿದ್ದಾಗಲೇ ಅವರಿಗೆ ತಪ್ಪಿಲ್ಲದೆ ಪದಗಳನ್ನು ಬರೆಯುವುದರ ಮಹತ್ವವನ್ನು ತಿಳಿಸಬೇಕು. ಮಗುವಿನ ಅಂಕ ಪಟ್ಟಿ ಪಡೆಯಲು ಶಾಲೆಗೆ ಬಂದಿದ್ದ ಪೋಷಕರೊಬ್ಬರು ವಿಜ್ಞಾನ ಶಿಕ್ಷಕರೊಟ್ಟಿಗೆ ವಾಗ್ವಾದಕ್ಕೆ ಇಳಿದಿದ್ದರು. ‘Siblings’ ಎನ್ನುವ ಪದವನ್ನು ಮಗು ‘sibbing’ ಎಂದು ಬರೆದಿತ್ತು. ಹೀಗಾಗಿ ಶಿಕ್ಷಕರು ಅದಕ್ಕೆ ಅಂಕವನ್ನು ಕಳೆದಿದ್ದರು. ಮೊದಲನೆಯ ತರಗತಿ ಓದುವ ಮಗು ಬರಿ ಒಂದಕ್ಷರವನ್ನು ತಪ್ಪಾಗಿ ಬರೆದಿದ್ದಕ್ಕೆ ಪೂರ್ತಿ ಅಂಕವನ್ನು ಏಕೆ ತೆಗೆದಿದ್ದೀರಿ ಎನ್ನುವುದು ಪೋಷಕರ ವಾದ. ನಾವೀಗ ಅಂಕವನ್ನು ಕಳೆಯದಿದ್ದರೆ ಮಗುವಿಗೆ ಸ್ಪೆಲ್ಲಿಂಗ್‌ನ ಮಹತ್ವವೇ ಗೊತ್ತಾಗುವುದಿಲ್ಲ ಎಂಬುದು ಶಿಕ್ಷಕರ ಪ್ರತ್ಯುತ್ತರ. ಮೇಲ್ನೋಟಕ್ಕೆ ಪೋಷಕರ ವಾದ ಸರಿಯೇನೋ ಎನಿಸಿದರೂ ಮುಂದೆ ಮಗುವಿಗೆ ಸ್ಪೆಲ್ಲಿಂಗ್ ಕೂಡ ಅಂಕ ಗಳಿಸುವಲ್ಲಿ ಮುಖ್ಯ ಎನ್ನುವುದು ಅರಿವಿಗೆ ಬರುವುದೇ ಇಲ್ಲ.

ಕಂಠಪಾಠ

ಬಹಳಷ್ಟು ಮಕ್ಕಳಿಗೆ ಕಂಠಪಾಠ ಮಾಡಿದರೆ ಸ್ಪೆಲ್ಲಿಂಗ್‌ಗಳು ನೆನಪಿನಲ್ಲಿ ಉಳಿಯುತ್ತವೆ. ನಾವೂ ಚಿಕ್ಕವರಿದ್ದಾಗ ಮಾಡಿರುವುದು ಅದೇ. ಉದಾಹರಣೆಗೆ ಒಎನ್‌ಇ -1, ಟಿಡಬ್ಲುಒ-2. ಕ್ರಮೇಣ ಕಂಠಪಾಠದ ಅಭ್ಯಾಸ ತನ್ನಿಂದ ತಾನೆ ನಿಲ್ಲುತ್ತದೆ. ಹೀಗಾಗಿ ಅದನ್ನು ತಪ್ಪೆಂದು ಹೇಳಲಾಗದು. ಕಂಠಪಾಠ ಮಾಡುವಾಗ ಜೋರಾಗಿ ಹೇಳಿಕೊಡುವುದು ಉತ್ತಮ. ಜೊತೆಗೆ ಪದಗಳ ಉಚ್ಚಾರ ಕೂಡ ಕರಗತವಾಗುತ್ತದೆ.

ಆಗಾಗ ಟಿಪ್ಪಣಿ ಕೊಡುವುದು

ಪ್ರತಿ ಪಾಠ ಮುಗಿದ ನಂತರ ಅದರಲ್ಲಿ ಬರುವ ಪ್ರಮುಖ ಪದಗಳನ್ನು (key words) ಶಾಲೆಗಳಲ್ಲಿ ಹೇಳಿ ಬರೆಸುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಈ ಅಭ್ಯಾಸ ಕಡಿಮೆ ಎನಿಸಿದರೂ ಮಕ್ಕಳಿಗೆ ಪದಗಳನ್ನು ತಿಳಿಯಲು ಅದರ ಸ್ಪೆಲ್ಲಿಂಗ್ ಕಲಿಯಲು ಇದೊಂದು ಒಳ್ಳೆಯ ಅಭ್ಯಾಸ. ತಪ್ಪಾದ ಪದಗಳನ್ನು 5–10 ಬಾರಿ ಬರೆಯುವುದರಿಂದ ಅದು ಮಗುವಿನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮನೆಯಲ್ಲೂ ಪೋಷಕರು ಇದನ್ನು ಮಾಡಿಸಬಹುದು.

ಫ್ಲಾಷ್ ಕಾರ್ಡ್‌ಗಳ ಬಳಕೆ

ಮೂರು ಅಥವಾ ನಾಲ್ಕು ಅಕ್ಷರಗಳಿರುವ ಪದಗಳ ಫ್ಲಾಷ್ ಕಾರ್ಡ್‌ಗಳನ್ನು ಬಳಸಿ ಮಕ್ಕಳಿಗೆ ಸ್ಪೆಲ್ಲಿಂಗ್‌ಗಳನ್ನು ಕಲಿಸಬಹುದು. ಸಂಬಂಧಪಟ್ಟ ಚಿತ್ರಗಳಿದ್ದರೆ ಮಕ್ಕಳಿಗೆ ಕಲಿಯಲು ಇನ್ನೂ ಸುಲಭ. ಮಾರುಕಟ್ಟೆಯಲ್ಲಿ ಸಿದ್ಧ ಫ್ಲಾಷ್ ಕಾರ್ಡ್‌ಗಳು ಲಭ್ಯ. ಮನೆಯಲ್ಲಿ ಮಕ್ಕಳ ಜೊತೆ ಕೂತು ಅವರಿಂದಲೇ ಕಾರ್ಡ್ ಬೋರ್ಡ್‌ಗಳನ್ನು ಬಳಸಿ ಕಾರ್ಡ್‌ಗಳನ್ನು ಮಾಡಿಸಬಹುದು. ಇದರಿಂದ ಮಗು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಾನೇ ಮಾಡಿದ ಹೆಮ್ಮೆಯಿಂದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತದೆ.

ಫೋನಿಕ್ಸ್ ಮಾದರಿ

ಇಂಗ್ಲಿಷ್ ಅಕ್ಷರಗಳನ್ನು ಗುರುತಿಸುವುದು ಬೇರೆ ಅದನ್ನು ಉಚ್ಚರಿಸುವ ಶಬ್ದ ಬೇರೆ. ಮಕ್ಕಳಿಗೆ ಅಕ್ಷರಕ್ಕೂ ಅದರ ಉಚ್ಚರಣೆಯ ಶಬ್ದಕ್ಕೂ ಇರುವ ವ್ಯತ್ಯಾಸ ತಿಳಿಸಿ ಕಲಿಸುವ ಪರಿಯೇ ಫೋನಿಕ್ಸ್. ಉದಾಹರಣೆಗೆ ‘B’ಯನ್ನು ಉಚ್ಚರಿಸುವಾಗ ಬ ಎನ್ನುತ್ತೇವೆ. ಈ ರೀತಿಯಾಗಿ ಕಲಿಸುವುದರಿಂದ ಮಗು ಸ್ವಂತವಾಗಿಯೇ ಅಕ್ಷರಗಳ ತಪ್ಪಿಲ್ಲದೆ ಪದಗಳನ್ನು ಬರೆಯುತ್ತದೆ.

ಪದಗಳ ವಿಂಗಡಣೆ

ಕೆಲವೊಮ್ಮೆ ಮಕ್ಕಳಿಗೆ ದೊಡ್ಡ ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಪದಗಳನ್ನು ಸಾಧ್ಯವಾದಷ್ಟೂ ಚಿಕ್ಕ ಭಾಗಗಳಾಗಿ ವಿಂಗಡಿಸಿ ಕಲಿಸಬಹುದು. ಉದಾಹರಣೆಗೆ Carbohydrates ಪದವನ್ನೇ ತೆಗೆದುಕೊಳ್ಳಿ. ಮಗುವಿಗೆ ಈಗಾಗಲೇ ಗೊತ್ತಿರುವ ಪದಗಳು ಬರುವಂತೆ ಅದನ್ನು ಸಣ್ಣ ಭಾಗಗಳಾಗಿ ಮಾಡಿ. (Car/ bo/ hyd / rates.) Antiseptic (Anti/sep/tic).

ಬರೆಯುವ ಹವ್ಯಾಸ

ಕಂಠಪಾಠದಷ್ಟೇ ಹೆಚ್ಚೆಚ್ಚು ಬರೆಯುವುದೂ ಕೂಡ ಮಕ್ಕಳಿಗೆ ಪದಗಳನ್ನು ಕಲಿಸುವುದರ ಜೊತೆಗೆ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಒಂದೇ ಸಮನೆ ಬರೆಯುವಷ್ಟು ತಾಳ್ಮೆಯನ್ನು ಮಕ್ಕಳಿಂದ ಆಪೇಕ್ಷಿಸುವುದು ಕಷ್ಟ. ಹೀಗಾಗಿ ಮಕ್ಕಳಿಗೆ ಇಷ್ಟವಾಗುವಂತಹ ಒಂದಿಷ್ಟು ವಿಧಾನಗಳನ್ನು ಅನುಸರಿಸಬಹುದು.

ಉದಾಹರಣೆಗೆ ಪಿರಮಿಡ್ ಸ್ಪೆಲ್ಲಿಂಗ್- ಒಂದು ಅಕ್ಷರಕ್ಕೆ ಮತ್ತೊಂದನ್ನು ಜೋಡಿಸುತ್ತಾ ಬರೆಯುವುದೇ ಪಿರಮಿಡ್ ಮಾದರಿ.

ಸುರುಳಿಯಾಕಾರದಲ್ಲಿ ಬರೆಸುವುದು: ಸುರುಳಿಯಾಕಾರವನ್ನು ಬಣ್ಣದ ಪೆನ್ಸಿಲ್‌ಗಳಲ್ಲಿ ಬರೆದು ಅದರಂತೆ ಒಂದೊಂದು ಪದಗಳನ್ನು ಐದಾರು ಬಾರಿ ಪುನರಾವರ್ತಿಸಿ ಬರೆಸುವುದು.

ಚೌಕಗಳನ್ನು ತುಂಬುವುದು: ಒಂದಿಷ್ಟು ಚೌಕಗಳನ್ನು ಹಾಕಿ ಒಂದೊಂದು ಪದವೂ ಮೂರ್ನಾಲ್ಕು ಬಾರಿ ಪುನರಾವರ್ತನೆಯಾಗುವಂತೆ ತುಂಬಿಸುವುದು. ಪದಗಳಿಗೆ ವಿವಿಧ ಬಣ್ಣದ ಕೋಡ್‌ಗಳನ್ನೂ ಕೂಡ ಕೊಡಬಹುದು.

ಮರಳಿನ ಮೇಲೆ ಬರೆಸುವುದು: ಮರಳಿನ ಮೇಲೆ ಬರೆಯುವುದೆಂದರೆ ಮಕ್ಕಳಿಗೆ ಇಷ್ಟ. ಹೀಗಾಗಿ ಬಾಕ್ಸ್‌ಗಳಲ್ಲಿ ಮರಳನ್ನು ತುಂಬಿಸಿ ಅದರಲ್ಲಿ ಆಗಾಗ್ಗೆ ಬರೆಸುವುದರಿಂದಲೂ ಮಕ್ಕಳಿಗೆ ಸ್ಪೆಲ್ಲಿಂಗ್‌ಗಳನ್ನು ಅಭ್ಯಾಸ ಮಾಡಿಸಬಹುದು.

ಪದಗಳ ಆಟ

ನಲಿ ಕಲಿ, ಆಟದ ಜೊತೆ ಪಾಠ ಎನ್ನುವಂತೆ ಸ್ಪೆಲ್ಲಿಂಗ್‌ಗಳನ್ನು ಕೂಡ ಆಟದ ಜೊತೆ ಕಲಿಯಬಹುದು. ಪಝಲ್‌ಗಳನ್ನು ಜೋಡಿಸುವ ಮೂಲಕ, ಕಾರ್ಡ್‌ಗಳನ್ನು ಹೊಂದಿಸುವುದು, ಜಿಗ್ಸಾ, ಸುಡುಕೊ ಮಾದರಿ, ಪುಸ್ತಕದಲ್ಲಿನ ಪದಗಳ ಹುಡುಕಾಟ, ಚಟುವಟಿಕೆಗೆ ಸಂಬಂಧಿಸಿದ ವರ್ಕ್ ಶೀಟ್‌ಗಳು ಇತ್ಯಾದಿ. ಇನ್ನು ಅದಕ್ಕಾಗಿ ಸಾಕಷ್ಟು ಆನ್‌ಲೈನ್ ಗೇಮ್‌ಗಳು ಮತ್ತು ಆ್ಯಪ್‌ಗಳು ಇವೆ. ಮಕ್ಕಳು ಮೊಬೈಲ್ ಅಥವಾ ಕಂಪ್ಯೂಟರ್‌ಗಳನ್ನು ಬಳಸುವಾಗ ಪೋಷಕರು ಜೊತೆಯಿದ್ದರೆ ಒಳ್ಳೆಯದು. ಒಬ್ಬರನ್ನೆ ಕೂರಿಸುವ ಬದಲು ಇತರರೊಟ್ಟಿಗೆ ಸೇರಿ ಆಡುವುದರಿಂದ ಕಲಿಕೆಯನ್ನು ಮಗು ಇನ್ನಷ್ಟು ಆನಂದಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.