ಮಂಗಳವಾರ, 20 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿ.ಎ ತಯಾರಿ ಹೇಗಿರಬೇಕು?

Published 15 ಜುಲೈ 2024, 0:31 IST
Last Updated 15 ಜುಲೈ 2024, 0:31 IST
ಅಕ್ಷರ ಗಾತ್ರ

1. ಸಿ.ಎ ಮಾಡಬೇಕಾದರೆ ತಯಾರಿ ಹೇಗಿರಬೇಕು?

ಹೆಸರು, ಊರು ತಿಳಿಸಿಲ್ಲ.

ಸಿ.ಎ ಮಾಡಲು ಎರಡು ಆಯ್ಕೆಗಳಿರುತ್ತವೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಫೌಂಡೇಷನ್ ಕೋರ್ಸ್‌ಗೆ ಸೇರಿ, ಶೇ 50 ಅಂಕಗಳನ್ನು ಪಡೆದರೆ, ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಕಾಂ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಗಳಿಸಿ ನೇರವಾಗಿ ಸಿ.ಎ ಇಂಟರ್‌ಮೀಡಿಯಟ್ ಕೋರ್ಸ್ ಮಾಡಬಹುದು. ಇನ್ನಿತರ ಪದವೀಧರರು ಕನಿಷ್ಠ ಶೇಕಡ 60 ಪಡೆದಿರಬೇಕು.

ಜೊತೆಗೆ, 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಇಂಟರ್‌ಮೀಡಿಯೆಟ್ ಮತ್ತು ಫೈನಲ್ ಪರೀಕ್ಷೆಗಳಲ್ಲಿರುವ ಎರಡು ಗ್ರೂಪ್‌ಗಳನ್ನು ಪ್ರತ್ಯೇಕವಾಗಿ ಬರೆಯುವ ಅವಕಾಶವಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಪರೀಕ್ಷೆಯ ಕಾರ್ಯತಂತ್ರವನ್ನು ರೂಪಿಸಬೇಕು. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿ.ಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=RyNVWuRVjbA

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT