ನವದೆಹಲಿ: ಜೆಇಇ (ಮೇನ್) ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 44 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಮಂಗಳವಾರ ಮಧ್ಯರಾತ್ರಿ ಫಲಿತಾಂಶ ಪ್ರಕಟವಾಗಿದ್ದು, 18 ವಿದ್ಯಾರ್ಥಿಗಳು ಉನ್ನತಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ:ತಜ್ಞರ ಸಲಹೆ: ವೃತ್ತಿಯಲ್ಲಿ ತೃಪ್ತಿಯಿಲ್ಲದಿದ್ದರೆ ಏನು ಮಾಡಬೇಕು?

ಮೊದಲ ರ‍್ಯಾಂಕ್ ಪಡೆದವರದಲ್ಲಿ ಗೌರವ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ವೆಂಕಟ ಪನೀಶ್ (ಆಂಧ್ರಪ್ರದೇಶ), ಸಿದ್ದಾಂತ್ ಮುಖರ್ಜಿ, ಅಂಶುಲ್ ವರ್ಮಾ, ಮೃದುಲ್ ಅಗರ್ವಾಲ್ (ರಾಜಸ್ಥಾನ), ರುಚಿರ್ ಬನ್ಸಾಲ್, ಕಾವ್ಯಾ ಚೋಪ್ರಾ (ದೆಹಲಿ), ಅಮಯ್ಯ ಸಿಂಘಾಲ್, ಪಾಲ್ ಅಗರ್ವಾಲ್ (ಉತ್ತರ ಪ್ರದೇಶ), ಕೊಮ್ಮಾ ಶರಣ್ಯ, ಜೋಯ್ಸುಲಾ ವೆಂಕಟ ಆದಿತ್ಯ (ತೆಲಂಗಾಣ), ಪಸಾಲ ವೀರ ಶಿವ, ಕರ್ಣಂ ಲೋಕೇಶ್, ಕಾಂಚನಪಲ್ಲಿ ರಾಹುಲ್ ನಾಯ್ಡು (ಆಂಧ್ರಪ್ರದೇಶ), ಪುಲ್ಕಿತ್ ಗೋಯಲ್ (ಪಂಜಾಬ್) ಮತ್ತು ಗುರಮೃತ್ ಸಿಂಗ್ (ಚಂಡೀಗಡ) ಒಳಗೊಂಡಿದ್ದಾರೆ.

ಈ ವರ್ಷದಿಂದ ಜೆಇಇ (ಮೇನ್) ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಮೊದಲ ಎಡಿಷನ್ ಫೆಬ್ರುವರಿಯಲ್ಲಿ ಹಾಗೂ ಎರಡನೇ ಎಡಿಷನ್ ಪರೀಕ್ಷೆಯನ್ನು ಮಾರ್ಚ್‌ನಲ್ಲಿ ನಡೆಸಲಾಯಿತು.

ಮುಂದಿನ ಹಂತಗಳ ಪರೀಕ್ಷೆಯನ್ನು ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿಗದಿಪಡಿಸಲಾಗಿತ್ತಾದರೂ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಮೂರನೇ ಎಡಿಷನ್ ಜುಲೈ 20ರಿಂದ 25 ಹಾಗೂ ನಾಲ್ಕನೇ ಎಡಿಷನ್ ಆಗಸ್ಟ್ 26ರಿಂದ ಸೆಪ್ಟೆಂಬರ್ 2ರ ವರೆಗೆ ನಡೆಸಲಾಯಿತು.

ಜೆಇಇ (ಮೇನ್) ನಾಲ್ಕು ಎಡಿಷನ್ ಪರೀಕ್ಷೆಯನ್ನು 9.34 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.