ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ–2ರ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶೇ 31.02 ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದಿದ್ದ 2.23 ಲಕ್ಷ ವಿದ್ಯಾರ್ಥಿಗಳಲ್ಲಿ 69,275 ಮಂದಿ ತೇರ್ಗಡೆಯಾಗಿದ್ದಾರೆ. ಎರಡನೇ ಪರೀಕ್ಷೆಯಲ್ಲೂ ಬಾಲಕಿಯರೇ (ಶೇ 38.48) ಹೆಚ್ಚು ತೇರ್ಗಡೆಯಾಗಿದ್ದಾರೆ. 1.44 ಲಕ್ಷ ಬಾಲಕರು ಪರೀಕ್ಷೆ ಬರೆದಿದ್ದರೂ, ಉತ್ತೀರ್ಣರಾದವರು 38,820 ವಿದ್ಯಾರ್ಥಿಗಳು ಮಾತ್ರ. 79,140 ವಿದ್ಯಾರ್ಥಿನಿಯರಲ್ಲಿ 30,455 ತೇರ್ಗಡೆಯಾಗಿದ್ದಾರೆ.

ಖಾಸಗಿ ಶಾಲೆಗಳಿಗೆ ಶೇ 38.21, ಅನುದಾನಿತ ಶೇ 28.71 ಹಾಗೂ ಸರ್ಕಾರಿ ಶಾಲೆಗಳಿಗೆ ಶೇ 29.43 ಫಲಿತಾಂಶ ದೊರೆತಿದೆ. ನಗರ ಪ್ರದೇಶಕ್ಕೆ ಶೇ 31.17 ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೇ 30.93 ಫಲಿತಾಂಶ ಬಂದಿದೆ.

ಆ.2ರಿಂದ ಪರೀಕ್ಷೆ–3:

ಎಸ್ಎಸ್ಎಲ್ಸಿ ಪರೀಕ್ಷೆ–3 ಆ.2ರಿಂದ 9ರವರೆಗೆ ನಡೆಯಲಿದೆ. ಹೆಸರು ನೋಂದಾಯಿಸಲು ಜುಲೈ 17 ಕೊನೆಯ ದಿನ. ಫಲಿತಾಂಶ ಪ್ರಕಟವಾದ ಕ್ಷಣದಿಂದಲೇ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಜುಲೈ 15ರ ಒಳಗೆ, ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ, ಮರು ಎಣಿಕೆಗೆ ಜುಲೈ 18ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.

ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.