ಮೂರು ಪರೀಕ್ಷಾ ಪದ್ಧತಿ ಪರಿಚಯಿಸಲಾಗಿದೆ. ಕಡಿಮೆ ಅಂಕ ಪಡೆದ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಮೂರು ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಿದ ಅಂಕಪಟ್ಟಿ ಪಡೆಯಬಹುದು. ಶಾಲೆಗಳಲ್ಲೇ ಹೆಚ್ಚುವರಿ ಬೋಧನೆಗೂ ವ್ಯವಸ್ಥೆ ಮಾಡಲಾಗಿದೆ
-ರಿತೇಶ್‌ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಇಲಾಖೆ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ಮಗ ಎಂಜಿನಿಯರಿಂಗ್‌ನಲ್ಲಿ ವಿಫಲನಾದ. ಪ್ರೌಢಶಾಲೆಯಲ್ಲಿ ಗುಣಮಟ್ಟದ ಪಾಠ ಮಾಡದೇ ನಕಲು ಮಾಡಿಸಿದ್ದರ ಫಲ ಈಗ ಅನುಭವಿಸುತ್ತಿದ್ದೇವೆ. ಮಕ್ಕಳು ಅನುತ್ತೀರ್ಣರಾದರೂ ಪರವಾಗಿಲ್ಲ. ಪಾರದರ್ಶಕ ಪರೀಕ್ಷೆ ನಡೆಸಬೇಕು
-ಅನುರಾಗ್, ಪೋಷಕ, ಚಿತ್ರದುರ್ಗ
12 ವರ್ಷಗಳ ಹಿಂದಿನ ಮಾತು. ಕೊಠಡಿಯಲ್ಲಿ ನಡೆಯುತ್ತಿದ್ದ ಸಾಮೂಹಿಕ ನಕಲು ವಿರೋಧಿಸಿದಕ್ಕೆ ಶಿಕ್ಷಕರೇ ಅವಮಾನಿಸಿದ್ದರು. ನಿಯತ್ತಿನಿಂದ ಓದಿದ್ದಕ್ಕೆ ಈಗ ಸರ್ಕಾರಿ ಅಧಿಕಾರಿಯಾಗಿರುವೆ