ಬಿವೈಪಿಎಲ್ ಸಶಕ್ತ್

ಸಮಾಜದ ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್ (ಬಿವೈಪಿಎಲ್) ನೀಡುವ ಅವಕಾಶ ಇದಾಗಿದೆ.

ಅರ್ಹತೆ: ಪಿಯುಸಿ ಕಲಿಯುತ್ತಿರಬೇಕು. ಮುಂಚಿನ ಪರೀಕ್ಷೆಗಳಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳನ್ನು ಪಡೆದಿರಬೇಕು. ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ₹ 6,00,000 ಮೀರಬಾರದು.
ಆರ್ಥಿಕ ನೆರವು: ₹ 30,000ದ ವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ: 14-11-2024
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/BYPL5

ಡಿಎಕ್ಸ್ಸಿ ಪ್ರೊಗೆಸಿಂಗ್ ಮೈಂಡ್ಸ್

ಡಿಎಕ್ಸ್ಸಿ ಟೆಕ್ನಾಲಜಿಯ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ವೆಚ್ಚಗಳಿಗೆ ನೆರವು ನೀಡಲಿದೆ.

ಅರ್ಹತೆ: ಸ್ಟೆಮ್-ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ವರ್ಷದ ಪದವಿ ಅಭ್ಯಾಸ ಮಾಡುತ್ತಿರುವ ಮಹಿಳೆಯರು ಮತ್ತು ಲಿಂಗಪರಿವರ್ತಿತರು ಅರ್ಜಿ ಸಲ್ಲಿಸಬಹುದು.
13ರಿಂದ 25 ವರ್ಷ ವಯಸ್ಸಿನೊಳಗಿನ ಮತ್ತು ಕಳೆದ ಮೂರು ವರ್ಷಗಳಲ್ಲಿ ರಾಜ್ಯ/ ರಾಷ್ಟ್ರೀಯ / ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ / ದೇಶವನ್ನು ಪ್ರತಿನಿಧಿಸಿರುವ ಮಹಿಳಾ ಕ್ರೀಡಾಪಟುಗಳೂ ಅರ್ಜಿ ಸಲ್ಲಿಸಬಹುದು.
ಹಿಂದಿನ ತರಗತಿ/ಸೆಮಿಸ್ಟರ್ನಲ್ಲಿ ಕನಿಷ್ಠ ಶೇ 60ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹4,00,000ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು (ಕ್ರೀಡಾಪಟುಗಳಿಗೆ ₹5,00,000)
ಆರ್ಥಿಕನೆರವು: ಸ್ಟೆಮ್ನಲ್ಲಿ ಪದವಿಗೆ - ₹50,000

ಕ್ರೀಡಾಪಟುಗಳಿಗೆ - ₹1,25,000
ಅರ್ಜಿ ಸಲ್ಲಿಸಲು ಕೊನೆ ದಿನ: 31-10-2024

ಹೆಚ್ಚಿನ ಮಾಹಿತಿಗೆ: www.b4s.in/praja/DXCS4

ಕೋಟಕ್ ಕನ್ಯಾ

ಕೋಟಕ್ ಮಹೀಂದ್ರಾ ಗ್ರೂಪ್ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಪಡೆಯಲು ಹಂಬಲಿಸುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಿದೆ.

ಅರ್ಹತೆ: ಭಾರತಾದ್ಯಾಂತ ಇರುವ ಪ್ರತಿಭಾನ್ವಿತ ವಿದ್ಯಾರ್ಥನಿಯರು ಅರ್ಜಿ ಸಲ್ಲಿಸಬಹುದು. 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 75 ಅಥವಾ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು₹ 6,00,000ಕ್ಕಿಂತ ಕಡಿಮೆ ಇರಬೇಕು.
ಮಾನ್ಯತೆ ಪಡೆದ ಎನ್ಆರ್ಎಫ್/ ಎನ್ಎಎಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25 ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್ಎಲ್ಬಿ (5 ವರ್ಷಗಳು), ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಸಿ, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್-ರಿಸರ್ಚ್ ಇನ್ ಐಎಸ್ಇಆರ್, ಐಐಎಸ್ಸಿ (ಬೆಂಗಳೂರು) ಅಥವಾ (ಡಿಸೈನ್, ಆರ್ಕಿಟೆಕ್ಚರ್, ಇತ್ಯಾದಿ) ಇತರ ವೃತ್ತಿಪರ ಕೋರ್ಸ್ಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.

ಆರ್ಥಿಕ ಸಹಾಯ: ವರ್ಷಕ್ಕೆ ₹1.5 ಲಕ್ಷ

ಹೆಚ್ಚಿನ ಮಾಹಿತಿಗೆ: www.b4s.in/praja/KKGS3

ಎಸ್ಬಿಐಎಫ್ ಆಶಾ ಸ್ಕಾಲರ್ಷಿಪ್

ಎಸ್ಬಿಐ ಫೌಂಡೇಷನ್ನ ಉಪಕ್ರಮವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಿದೆ.

ಅರ್ಹತೆ: 6 ರಿಂದ 12 ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು, ಅಗ್ರ 100 ಎನ್ಐಆರ್ಎಫ್ ವಿಶ್ವವಿದ್ಯಾಲಯಗಳು/ಕಾಲೇಜುಗಳ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಐಐಟಿಗಳ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಐಐಎಂಗಳ ಎಂಬಿಎ/ಪಿಜಿಡಿಎಂ ಕೋರ್ಸ್ಗಳಲ್ಲಿ ಕಲಿಯುತ್ತಿರಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು. ವಾರ್ಷಿಕ ಆದಾಯವು ₹ 6 ಲಕ್ಷದವರೆಗೆ ಇರಬೇಕು (6-12ನೇ ತರಗತಿಯ ವಿದ್ಯಾರ್ಥಿಗಳಾದರೆ ರೂ. 3 ಲಕ್ಷದವರೆಗೆ).
ಅರ್ಹತೆ:
6 ರಿಂದ 12ನೇ ತರಗತಿಯವರೆಗೆ: ತಲಾ ₹ 15,000
ಯುಜಿ ವಿದ್ಯಾರ್ಥಿಗಳು: ₹50,000ದ ವರೆಗೆ
ಪಿಜಿ ವಿದ್ಯಾರ್ಥಿಗಳು: ₹ 70,000ದ ವರೆಗೆ
ಐಐಟಿಗಳ ಯುಜಿ ವಿದ್ಯಾರ್ಥಿಗಳು: ₹2,00,000ದ ವರೆಗೆ
ಐಐಎಂಗಳ ಎಂಬಿಎ ವಿದ್ಯಾರ್ಥಿಗಳು: ₹7,50,000ದ ವರೆಗೆ

ಹೆಚ್ಚಿನ ಮಾಹಿತಿಗೆ: www.b4s.in/praja/SBIFS7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.