ಅಹಮದಾಬಾದ್: ರಜಪೂತ ದೊರೆಗಳ ಬಗ್ಗೆ ‘ಆಕ್ಷೇಪಾರ್ಹ’ ಎನ್ನಲಾದ ಮಾತುಗಳನ್ನು ಆಡಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಕೋಟ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ವಿರುದ್ಧ ಸಿಡಿದೆದ್ದಿರುವ ಕ್ಷತ್ರಿಯ ಸಮುದಾಯವನ್ನು ಸಮಾಧಾನಿಸಲು ಬಿಜೆಪಿ ಮುಂದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪಾಲಾ ಅವರು ಈಗಾಗಲೇ ಮೂರು ಬಾರಿ ಕ್ಷಮೆಯಾಚಿಸಿರುವುದರಿಂದ ಅವರನ್ನು ಮನ್ನಿಸಿ ಎಂದು ಗುಜರಾತ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಮಂಗಳವಾರ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಮ್ಮುಖದಲ್ಲಿ ರಜಪೂತ ಸಮುದಾಯದ ಮುಖಂಡರೊಂದಿಗೆ ಪಾಟೀಲ್ ಸಭೆ ನಡೆಸಿದರು. ಪ್ರಕರಣಕ್ಕೆ ಅಂತ್ಯ ಹಾಡುವ ಸಲುವಾಗಿ ಒಂದು ಪರಿಹಾರ ಕಂಡುಕೊಳ್ಳಲು ಸಮುದಾಯದ ಸಮನ್ವಯ ಸಮಿತಿ ಸಭೆಯನ್ನು ಬುಧವಾರ ಮಧ್ಯಾಹ್ನ ಕರೆಯಲಾಗಿದೆ ಎಂದು ಪಟೇಲ್ ತಿಳಿಸಿದರು.

‘ರಜಪೂತ ದೊರೆಗಳು ಬ್ರಿಟಿಷರಿಗೆ ಸಹಕರಿಸಿದ್ದರು ಮತ್ತು ಅವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು’ ಎಂದು ರೂಪಾಲಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.