ಹೊಸಪೇಟೆ: ‘ನಾನು ದ್ವೇಷದ ರಾಜಕಾರಣ ಮಾಡಲ್ಲ. ಹಿಂದಿನ ಶಾಸಕರು (ಆನಂದ್ ಸಿಂಗ್) ಕೂಡ ದ್ವೇಷದ ರಾಜಕಾರಣ ಮಾಡಬಾರದು’

ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ ಅವರು ಗೆಲುವು ಸಾಧಿಸಿದ ನಂತರ ಮಾಧ್ಯಮದವರಿಗೆ ಶನಿವಾರ ನೀಡಿದ ಮೊದಲ ಪ್ರತಿಕ್ರಿಯೆ ಇದು.

ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶುಭ ಹಾರೈಕೆಗಳನ್ನು ಸ್ವೀಕರಿಸುತ್ತಲೇ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ನನ್ನ ಮಗ ಇದ್ದಂತೆ. ಆನಂದ್ ಸಿಂಗ್ ಬೇರೆ. ಸಿದ್ದಾರ್ಥ ಅವರನ್ನೂ ಜೊತೆಗೆ ಕರೆದೊಯ್ಯಬೇಕಾಗುತ್ತದೆ. ದ್ವೇಷದ ರಾಜಕಾರಣ ನಾನು ಮಾಡಲ್ಲ. ದ್ವೇಷದ ರಾಜಕಾರಣ ಮಾಡಬಾರದು ಎಂದು ಹಿಂದಿನ ಶಾಸಕರಿಗೆ ಕಿವಿಮಾತು ಹೇಳುವೆ ಎಂದರು.

ಇದು ಗವಿಯಪ್ಪನ ಗೆಲುವಲ್ಲ. ಇದು ಜನರ ಗೆಲುವು. ಜನ ಗೆದ್ದಿದ್ದಾರೆ. ಈ ಕ್ಷೇತ್ರದ ಜನ ಗೆದ್ದಿದ್ದಾರೆ. ಈ ಸಲ ಜನ ಮೊದಲೇ ತೀರ್ಮಾನಿಸಿದ್ದರು. ಬದಲಾವಣೆ ಬಯಸಿದ್ದರು. ಸ್ಥಳೀಯ ಶಾಸಕರು, ಸರ್ಕಾರದ ವಿರುದ್ಧ ಆಡಳಿತರೂಢ ಅಲೆ ಇತ್ತು. ಆನಂದ್ ಸಿಂಗ್ ಅವರು ಮಗನಿಗೆ ಚುನಾವಣೆಗೆ ನಿಲ್ಲಿಸಿದರೂ ವ್ಯತ್ಯಾಸವಾಗಲಿಲ್ಲ ಎಂದರು.

33996 ಮತಗಳ ಅಂತರದಿಂದ ಗವಿಯಪ್ಪ ಗೆಲುವು

ವಿಜಯನಗರ ಕ್ಷೇತ್ರದ 18ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ 104393 ಮತ ಗಳಿಸಿದ್ದು, 33996 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.. ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ 70397 ಮತ ಗಳಿಸಿದ್ದಾರೆ.

ನಾನು ಸದಾ ಜನರ ಕೈಗೆ ಸಿಗುತ್ತೇನೆಂದು ಜನರಿಗೆ ಗೊತ್ತಿದೆ. ಆದರೆ, ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಮೊದಲಿನಿಂದಲೂ ಜನ ಸೇವೆ ಮಾಡುತ್ತಲೇ ಇದ್ದೆ. ಒಂದು ಸಲ ಗವಿಯಪ್ಪವರಿಗೆ ಅವಕಾಶ ಕೊಡಬೇಕೆಂದು ಜನ ಗೆಲ್ಲಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಷ್ಟ ಸುಖಗಳಿಗೆ ಸ್ಪಂದಿಸುವ ಅಗತ್ಯ ಕ್ಷೇತ್ರದಲ್ಲಿದೆ. ವಾರ್ಡ್, ಗ್ರಾಮ ಸಭೆ ನಡೆಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವೆ. ಕಳೆದ 15 ವರ್ಷಗಳಿಂದ ಬಡವರಿಗೆ ನಿವೇಶನ ಕೊಟ್ಟಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿವೇಶನಗಳನ್ನು ಒದಗಿಸುವೆ. ಅದಕ್ಕಾಗಿ ಶಕ್ತಿಮೀರಿ ಶ್ರಮಿಸುವೆ ಎಂದು ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ಬೇಕಾದ ಮೂಲಸೌಕರ್ಯ ಕಲ್ಪಿಸಲು ಸಿದ್ದರಾಮಯ್ಯ ಈಗಾಗಲೇ ಭರವಸೆ ಕೊಟ್ಟಿದ್ದಾರೆ. ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಮಾಲೀಕರೊಂದಿಗೆ ಚರ್ಚಿಸಲಾಗುವುದು. ಅವರು ಒಪ್ಪದಿದ್ದರೆ ಸರ್ಕಾರದಿಂದ ಆರಂಭಿಸಲು ಶ್ರಮಿಸುವೆ. ಹೋಟೆಲ್ ಇಂಡಸ್ಟ್ರಿಗೆ ಉತ್ತಮ ಅವಕಾಶಗಳಿವೆ, ಅದಕ್ಕಾಗಿ ಶ್ರಮ ವಹಿಸುವೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ನಾನು ರಾಜಕೀಯದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಶಾಸಕನಾಗಿ ಕೆಲಸ ಮಾಡಿದ ಅನುಭವವಿದೆ. ಸಚಿವ ಸ್ಥಾನ ಕೊಡಬೇಕೆಂಬ ಮನವಿ ಸಲ್ಲಿಸುತ್ತೇನೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.