ಬೆಂಗಳೂರು: ಸ್ಟ್ರೈಡ್ ಎಫ್ಸಿ ತಂಡವು ಜಗದೇಶ್ವರ ಆಚಾರ್ ಶೀಲ್ಡ್ಗಾಗಿ ನಡೆದ ಬಿಡಿಎಫ್ಎ ‘ಬಿ’ ಡಿವಿಷನ್ ಕ್ಲಬ್ಗಳ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಕೆಂಗೇರಿಯ ಸಾಯ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಸ್ಟ್ರೈಡ್ ತಂಡವು 3–2ರಿಂದ ಇನ್ಫಿನೆಟ್ ಬೆಳಗಾವಿ ಎಫ್.ಸಿ ತಂಡವನ್ನು ಮಣಿಸಿತು. ಸ್ಟ್ರೈಡ್ ಪರ ಅಭಿನಾಶ್ ದಾಸ್ (8ನೇ ನಿಮಿಷ), ವೇದಾಂತ್ ಬ್ಯಾನರ್ಜಿ (25ನೇ ನಿ) ಮತ್ತು ಕಾರ್ತಿಕೇಯನ್ ಜೆ (31ನೇ ನಿ) ಗೋಲು ಗಳಿಸಿದರು. ಬೆಳಗಾವಿ ಪರ ಮೊಹಮ್ಮದ್ ಶಮಿಲ್ ಪಿ. (40ನೇ ನಿ) ಮತ್ತು ಅಂಕಿತ್ ಮಾನೆ (41ನೇ) ಅವರು ಚೆಂಡನ್ನು ಗುರಿ ಸೇರಿಸಿದರು.

ಸ್ಟ್ರೈಡ್ನ ರಾಜೇಶ್ ಟಿ. ಸರಣಿಯ ಆಟಗಾರ; ರಿವೈವ್ ಎಫ್.ಸಿ.ಯ ಸತೀಶ್ ಎಸ್. ಉತ್ತಮ ಗೋಲ್ಕೀಪರ್; ಜುನೊ ಎಫ್.ಸಿ.ಯ ಬಲ್ವಿಂದರ್ ಸಿಂಗ್ ಉತ್ತಮ ಡಿಫೆಂಡರ್ ಮತ್ತು ಇನ್ಫಿನೆಟ್ನ ಮೊಹಮ್ಮದ್ ಶಮಿಲ್ ಅಗ್ರ ಸ್ಕೋರರ್ ಗೌರವಕ್ಕೆ ಪಾತ್ರವಾದರು.

ವಿಜೇತ ತಂಡಕ್ಕೆ ಬಿಡಿಎಫ್ಎ ಅಧ್ಯಕ್ಷ ಎಸ್.ಎಂ.ಬಾಲು, ಹಿರಿಯ ಸದಸ್ಯ ಆರ್.ಮೋಹನ್ ಟ್ರೋಫಿ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.