ದಿನ ಭವಿಷ್ಯ | ಈ ರಾಶಿಯವರು ಸಂಜೆಯೊಳಗೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ
Published 16 ನವೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಮಾತಿನಂತೆ ನಡೆಯುವುದು ಉತ್ತಮ. ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ನಿಮ್ಮ ಅಭ್ಯುದಯದತ್ತಲೇ ನಿಮ್ಮ ಗಮನವಿರುವುದು ಉತ್ತಮ.
ವೃಷಭ
ಧಾರ್ಮಿಕ ಕಾರ್ಯಕ್ಕೆ ಹಣ ನೀಡುವ ಮನಸ್ಸಾಗಲಿದೆ. ವ್ಯಾಪಾರಸ್ಥರು ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಡುವ ಬಗ್ಗೆ ಗಮನವಿರಲಿ. ನಿಮ್ಮ ಯೋಜನೆಗೆ, ಮಾತುಗಳಿಗೆ ಎಲ್ಲರಿಂದಲೂ ಮನ್ನಣೆ ದೊರೆಯಲಿದೆ.
ಮಿಥುನ
ಮನೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮನೆಯ ವಾತಾವರಣ ಸರಿಯಾಗಿರುವುದು. ಮಹಾಗಣಪತಿಯ ಆರಾಧನೆಯಿಂದ ನಿಮ್ಮ ಮನೋಕಾಮನೆಗಳು ಈಡೇರುವುದು.
ಕರ್ಕಾಟಕ
ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು.
ಸಿಂಹ
ಬೇರೆಯವರ ಸಹಾಯ ಪಡೆಯದೆ ನಿಮ್ಮ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ. ನೀವು ಕೈಗೆತ್ತಿಕೊಂಡಿರುವ ಕೆಲಸಗಳು ಹೆಚ್ಚಿನ ಖರ್ಚಿನದಾದರೂ ಪ್ರಯೋಜನಕಾರಿ ಎನಿಸಲಿದೆ.
ಕನ್ಯಾ
ಹೊಸ ಮನೆಯ ಕೆಲಸಗಳು ಮುಕ್ತಾಯ ಹಂತವನ್ನು ತಲುಪುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ಅನೇಕ ರೀತಿಯಲ್ಲಿ ನಿಮಗೆ ಈ ದಿನ ಅದೃಷ್ಟದ ದಿನವೆನಿಸಲಿದೆ. ಮಗಳ ಮೇಲೆ ಇದ್ದಂತಹ ತಪ್ಪು ಕಲ್ಪನೆಗಳು ದೂರವಾಗಲಿವೆ.
ತುಲಾ
ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು, ಎಚ್ಚರ. ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗುವ ಲಕ್ಷಣಗಳಿದೆ. ಮಾನಸಿಕವಾದ ಕೊರಗುಗಳಿಗೆ ಅಂತಿಮ ಹಾಡಿ.
ವೃಶ್ಚಿಕ
ಜೀವನ ಶೈಲಿಯಲ್ಲಿ ಸಮತೋಲನ ಅನುಸರಿಸಿಕೊಂಡು ಹೋಗುವುದು ಒಳ್ಳೆಯದು. ಯಾವುದೇ ಟೀಕೆಗಳಿಗೆ ಕಿವಿಯೊಡ್ಡಬೇಡಿ, ಪ್ರಾಮಾಣಿಕತೆಯಿಂದ ನಿಮ್ಮ ಕೆಲಸ ಕಾರ್ಯವನ್ನು ಮುಂದುವರೆಸಿ.
ಧನು
ಸ್ವತ್ತು ಖರೀದಿ ಮಾಡುವ ವಿಚಾರದಲ್ಲಿ ಯಾವುದಾದರು ಗೃಹ ಸಮಾರಂಭದಲ್ಲಿ ನಾಲ್ಕಾರು ಜನರ ಮಧ್ಯ ಮಾತುಗಳು ಬರಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳುವುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗುತ್ತೀರಿ.
ಮಕರ
ಮಿತ್ರರೊಡಗೂಡಿ ಸಣ್ಣಮಟ್ಟದ ಉತ್ಪಾದನಾ ಘಟಕ ಪ್ರಾರಂಭಿಸುವ ಯೋಚನೆಗಳು ಬರಲಿದೆ. ಯಾವುದೇ ಕೆಲಸ ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು. ಸರ್ಕಾರಿ ಗುತ್ತಿಗೆ ಕೆಲಸಗಳು ನಿಮ್ಮದಾಗಲಿದೆ.
ಕುಂಭ
ನಿಮ್ಮ ಭಾವನೆಗಳಿಗೆ ಬೆಲೆ ಕೊಡುವ ಸಂಗಾತಿ ಸಿಕ್ಕಿರುವುದರಿಂದ ಸಂತೋಷ ಹೆಚ್ಚುತ್ತದೆ. ಕುಟುಂಬ ವರ್ಗದವರಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಉತ್ತಮ ಕೌಟುಂಬಿಕ ಸಮಯ ದೊರೆಯಲಿದೆ.
ಮೀನ
ಹಿರಿಯರಿಂದ ಯಾವುದೇ ವಿಷಯಗಳನ್ನು ಮುಚ್ಚಿಡುವುದು ಸರಿಯಲ್ಲ. ತಂದೆಯವರ ಮಾತಿನಂತೆ ನಡೆಯುವುದರಿಂದ ಶ್ರೇಯಸ್ಸು ಲಭಿಸಲಿದೆ. ಸಂಜೆಯೊಳಗೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ.