ವಾರ ಭವಿಷ್ಯ: ಈ ರಾಶಿಯವರ ಆಲೋಚನೆಗಳು ತರ್ಕಬದ್ಧವಾಗಿರುತ್ತದೆ
Published 16 ನವೆಂಬರ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
(ಅಶ್ವಿನಿ ಭರಣಿ ಕೃತಿಕ 1)
ನಿಮ್ಮಲ್ಲಿ ಸಾಕಷ್ಟು ಆಲಸ್ಯತೆ ಇರುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಹಲವು ಮೂಲಗಳಿಂದ ಆದಾಯ ಬರುವ ಸಾಧ್ಯತೆ ಇದೆ. ನಿಮ್ಮ ನಡವಳಿಕೆ ಹಾಗೂ ಕಾರ್ಯಗಳಿಗೆ ನಿಮ್ಮ ಹಿರಿಯರಿಂದ ಅಡ್ಡಿ ಬರುವ ಸಾಧ್ಯತೆ ಇದೆ. ಆಸ್ತಿ ಸಂಬಂಧಿಸಿದ ವಿಚಾರದಲ್ಲಿ ಇನ್ನಷ್ಟು ಮುಂದುವರೆಯಬಹುದು. ಕುಟುಂಬದಲ್ಲಿ ಕಲಹಗಳಿರುತ್ತವೆ. ಮಕ್ಕಳು ನಿಮ್ಮ ವಿರುದ್ಧ ಮಾತನಾಡಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನದಷ್ಟೇ ಯಶಸ್ಸು ಇರುತ್ತದೆ. ಹಿರಿಯರಿಂದ ಧನ ಸಹಾಯ ದೊರಕುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಹಿರಿಯರಿಂದ ಬರಬೇಕಿದ್ದ ಧನ ಸಹಾಯಗಳು ಬರುತ್ತವೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಮನಸ್ಸಿನಲ್ಲಿ ಬಹಳ ಆನಂದವಿರುತ್ತದೆ. ಕೈಹಾಕಿದ ಕೆಲಸಗಳಲೆಲ್ಲ ಯಶಸ್ಸು ದೊರಕುತ್ತದೆ. ಆದಾಯ ನಿಮ್ಮ ಅಪೇಕ್ಷೆಯಂತೆ ಬರುತ್ತದೆ. ಒಡಹುಟ್ಟಿದವರೊಡನೆ ಬಾಂಧವ್ಯ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುತ್ತದೆ. ಗುಹ್ಯರೋಗಗಳ ಸಮಸ್ಯೆ ಇರುವವರು ಎಚ್ಚರ ವಹಿಸಿರಿ. ಸಂಗಾತಿ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ವಿದೇಶ ವ್ಯವಹಾರ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಲೇಖಕರಿಗೆ ಅನಿರೀಕ್ಷಿತ ಅವಕಾಶಗಳು ಒದಗುವ ಸಾಧ್ಯತೆಗಳಿವೆ. ನ್ಯಾಯಾಧೀಶರುಗಳಿಗೆ ಉತ್ತಮ ನ್ಯಾಯ ದಾನ ಮಾಡುವ ಅವಕಾಶಗಳಿವೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ನಿರ್ಧಾರಗಳಲ್ಲಿ ನಡವಳಿಕೆಯಲ್ಲಿ ದ್ವಂದ್ವತೆ ಇರುತ್ತದೆ. ಕೃಷಿಯಿಂದ ಅಧಿಕ ಲಾಭ ಸಿಗಲಿದೆ. ಒಡಹುಟ್ಟಿದವರಿಂದ ನಿರೀಕ್ಷಿತ ಸಹಕಾರಗಳು ದೊರೆಯುವುದಿಲ್ಲ. ಆಸ್ತಿ ವಿಚಾರದಲ್ಲಿ ಹೆಚ್ಚು ಮುಂದಡಿ ಇಡುವುದು ಬೇಡ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ರಕ್ತ ಸಂಬಂಧಿ ಕಾಯಿಲೆಗಳು ಮತ್ತು ಕಣ್ಣಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿಮಗೆ ಸಾಕಷ್ಟು ಅನುಕೂಲವಾಗಲಿದೆ. ಸಂಗಾತಿಯ ವ್ಯವಹಾರಗಳಿಗಾಗಿ ಹೂಡಿದ ಬಂಡವಾಳ ಲಾಭವನ್ನು ತರುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಸ್ವಲ್ಪ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಕೆಲವು ಹಿರಿಯರು ನಿಮ್ಮ ವಿರುದ್ಧ ತಿರುಗಿ ಬೀಳುವರು.
ಕರ್ಕಾಟಕ
(ಪುನರ್ವಸು 4 ಪುಷ್ಯ ಆಶ್ಲೇಷ)
ಮನಸ್ಸಿನಲ್ಲಿ ಸಾಕಷ್ಟು ಧೈರ್ಯವಿದ್ದರೂ ಅದನ್ನು ತೋರಿಸುವ ಸಾಮರ್ಥ್ಯ ಇರುವುದಿಲ್ಲ. ಆದಾಯವು ನಿಮ್ಮ ಈಗನಿರೀಕ್ಷೆಯನ್ನು ತಲುಪಬಹುದು. ನಿಮ್ಮ ಧರ್ಮಕಾರ್ಯಗಳಿಗೆ ಹಾಗೂ ನ್ಯಾಯಯುತ ನಡವಳಿಕೆಗಳಿಗೆ ಮಾತ್ರ ಹಿರಿಯರ ಸಹಾಯ ಸಿಗುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಸರಿಯಾಗಿ ಆಲೋಚನೆ ಮಾಡಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸಿಗಿಂತ ಸ್ವಲ್ಪ ಕಡಿಮೆ ಯಶಸ್ಸು ಸಿಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಬಹುದು. ಸಂಗಾತಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚು. ಹಿರಿಯರು ಮಕ್ಕಳ ಸಲುವಾಗಿ ವಿದೇಶಕ್ಕೆ ಹೋಗಿ ಬರಬಹುದು.
ಸಿಂಹ
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕೆಲವೊಂದು ಪ್ರಯತ್ನಗಳು ಸಾಕಾರವಾಗಿ ಮನಸ್ಸಿಗೆ ಆನಂದ ತರಲಿದೆ. ಆದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭ ಸಿಗಲಿದೆ. ಸ್ವಂತ ಆಸ್ತಿಯನ್ನು ಕೊಳ್ಳಬಯಸುವವರಿಗೆ ದಾಖಲೆ ಪರಿಶೀಲನೆ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಅತ್ಯಂತ ಸಮೀಪದ ಫಲಿತಾಂಶ ಸಿಗಲಿದೆ. ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಸಂಗಾತಿಯಿಂದ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗಬಹುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚು. ವಿದೇಶಗಳಲ್ಲಿ ವಾಹನಗಳ ಮಾರಾಟ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ.
ಕನ್ಯಾ
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವಿಪರೀತವಾದ ಆಲಸ್ಯತೆ ನಿಮ್ಮಲ್ಲಿ ಇರುತ್ತದೆ. ಇದರಿಂದ ಹೊರಗೆ ಬರುವುದು ಬಹಳ ಉತ್ತಮ. ಆದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ನಡವಳಿಕೆ ಹಾಗೂ ವರ್ತನೆಗಳು ಹಿರಿಯರ ವಿರೋಧವನ್ನು ತರುತ್ತವೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೂ ಸ್ವಲ್ಪ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ಬಹಳ ಕಡಿಮೆ. ಮಕ್ಕಳಿಂದ ನಿಷ್ಠೂರದ ನುಡಿಗಳನ್ನು ಕೇಳಬೇಕಾಗಬಹುದು. ಉಸಿರಾಟದ ತೊಂದರೆ ಹಾಗೂ ಶಾಸಕೋಶದ ತೊಂದರೆಗಳಿರುವವರು ಎಚ್ಚರವಹಿಸಿರಿ. ಸಂಗಾತಿಯಿಂದ ವ್ಯತಿರಿಕ್ತದ ನಡವಳಿಕೆಗಳನ್ನು ಎದುರಿಸಬೇಕಾಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.
ತುಲಾ
(ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ನಡವಳಿಕೆಯಲ್ಲಿ ಬಹಳಷ್ಟು ವ್ಯಾವಹಾರಿಕತೆಯು ತುಂಬಿರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಆದಾಯಗಳು ಬರುತ್ತವೆ. ನಿಮ್ಮ ಕೆಲಸ ಕಾರ್ಯಗಳಿಗೆ ಮಹಿಳೆಯರು ಸಹಕಾರ ನೀಡುವವರು. ಭೂಮಿ ವ್ಯವಹಾರಗಳಲ್ಲಿ ಮಾತ್ರ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಗದು. ಸ್ನಾಯು ಸೆಳೆತಗಳು ಇರುವವರು ಎಚ್ಚರವಹಿಸಿರಿ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಸೂಕ್ತ ಅವಕಾಶಗಳು ದೊರೆಯುತ್ತದೆ. ಸಂಗಾತಿ ಕಡೆಯಿಂದ ಲಾಭ ಒದಗಿದರೂ ಅದು ಸೂಕ್ತ ಸಮಯದಲ್ಲಿ ಸಿಗುವುದಿಲ್ಲ. ತಂದೆಯಿಂದ ವ್ಯವಹಾರಕ್ಕೆ ಧನ ಸಹಾಯ ಸಿಗುತ್ತದೆ. ಧರ್ಮ ಕಾರ್ಯಗಳಿಂದ ಹಣ ಸಂಪಾದನೆ ಮಾಡಬಹುದು.
ವೃಶ್ಚಿಕ
(ವಿಶಾಖಾ 4 ಅನುರಾಧ ಜೇಷ್ಠ)
ಆತ್ಮಭಿಮಾನದ ಜೊತೆಗೆ ದೇಹ ಅಭಿಮಾನವು ಬೆಳೆಯುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಶತ್ರುಗಳು ನಿಮ್ಮ ತಂಟೆಗೆ ಬರುವುದನ್ನು ನಿಲ್ಲಿಸುವರು. ಕೃಷಿ ಭೂಮಿ ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ. ಆಸ್ತಿಕೊಳ್ಳಲು ಹೆಚ್ಚು ಹಣ ಹೂಡುವುದು ಬೇಡ. ವಿದೇಶದಲ್ಲಿ ಓದಬೇಕೆನ್ನುವವರೆಗೆ ಸೂಕ್ತ ಅವಕಾಶಗಳು, ಅನುಕೂಲಗಳು ದೊರೆಯುತ್ತವೆ. ಗುಪ್ತಾಂಗದ ಸಮಸ್ಯೆಗಳಿರುವವರು ಎಚ್ಚರ ವಹಿಸಿರಿ. ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಸಂಗಾತಿಯಿಂದ ಸಾಕಷ್ಟು ಅನುಕೂಲಗಳು ಒದಗಿ ಬರುತ್ತವೆ. ಹೈನುಗಾರಿಕೆ ಮಾಡುವವರಿಗೆ ಅನುಕೂಲವಿರುತ್ತದೆ. ಸಂಶೋಧಕರಿಗೆ ಹೆಚ್ಚು ಅನುಕೂಲವಿರುತ್ತದೆ.
ಧನು
(ಮೂಲ ಪೂರ್ವಾಷಾಢ ಉತ್ತರಾಷಾಢ 1 )
ನಿಮ್ಮ ಆಲೋಚನೆಗಳು ಸಾಕಷ್ಟು ತರ್ಕಬದ್ಧವಾಗಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಶತ್ರುಗಳು ನಿಮ್ಮ ನಡವಳಿಕೆಯನ್ನು ನೋಡಿ ಗಾಬರಿ ಬಿದ್ದು ಹಿಂದೆ ಸರಿಯುವರು. ವಿದೇಶದಲ್ಲಿರುವವರಿಗೆ ಸ್ಥಿರಾಸ್ತಿಗಳನ್ನು ಮಾಡಿಕೊಳ್ಳಲು ಅನುಕೂಲಕರವಾದ ಕಾಲ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಶೀತ ಬಾಧೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ಕೆಲವೊಂದು ನಿರ್ಧಾರಗಳಿಂದ ಹಣ ಖರ್ಚಾಗುತ್ತದೆ. ಪಾರಂಪರಿಕ ವಿದ್ಯೆಯನ್ನು ಹೇಳಿಕೊಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಏಳಿಗೆ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ಧಾರ್ಮಿಕ ಮುಖಂಡರುಗಳಿಗೆ ಹೆಚ್ಚು ಗೌರವ ದೊರೆಯುತ್ತದೆ.
ಮಕರ
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಶ್ರದ್ಧೆಯಿಂದ ಕೆಲಸ ಮಾಡಿ ಹೆಸರು ಗಳಿಸುವಿರಿ. ಆದಾಯವು ಕಡಿಮೆ ಇದ್ದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ. ವಿದೇಶದಲ್ಲಿರುವವರಿಗೆ ಅಲ್ಲಿನವರ ಸಹಕಾರ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ತಲೆನೋವು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ನೆರವು ದೊರಕುವುದರ ಜೊತೆಗೆ ಅವರ ಕಡೆಯವರಿಂದ ಜಮೀನು ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬಹುದು. ಸರ್ಕಾರಿ ಸಂಸ್ಥೆಗಳ ಜೊತೆಗೆ ವ್ಯಾಪಾರಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.
ಕುಂಭ
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಿರಿಯರ ಶಾಂತ ಸ್ವಭಾವ ಅವರಿಗೆ ಗೌರವವನ್ನು ತರುತ್ತದೆ. ತಾಳ್ಮೆಯಿಂದ ಅವರು ಎಲ್ಲವನ್ನೂ ಪರಿಹರಿಸಿಕೊಳ್ಳುವರು. ಯುವಕರ ಮಿತಿಮೀರಿದ ಮಾತುಗಳು ಅವರಿಗೆ ಬಹಳ ಸಂಕಟವನ್ನು ತರುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ವಿದೇಶಿ ಪತ್ರಿಕೆಗಳಿಗೆ ಪತ್ರಕರ್ತರಾಗಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹಿರಿಯರು, ಬಂಧುಗಳ ವಿರೋಧದ ನಡುವೆಯೂ ಜನ ಬೆಂಬಲ ಗಳಿಸುವರು. ಭೂಮಿ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಕಮಿಷನ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳು ಶೀಘ್ರಗತಿಯಲ್ಲಿ ಆಗುವುದು.
ಮೀನ
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ನಿಮ್ಮಲ್ಲಿ ಸಾಕಷ್ಟು ಅಸಹನೆ ತುಂಬಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರವು ಸ್ವಲ್ಪ ಮಟ್ಟಿಗೆ ದೊರೆಯುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳಲು ಕಾಲ ಪಕ್ವವಾಗಿದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಸಂಗಾತಿಯು ನಿಮ್ಮ ಕಡೆಗೆ ಗಮನಹರಿಸುತ್ತಿಲ್ಲವೆಂಬ ಕೊರಗಿರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳುವುದು ಬೇಡ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭವಿದೆ. ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ಸಲ್ಪ ಕಡಿಮೆಯಾಗಬಹುದು. ಎಲೆಕ್ಟ್ರಾನಿಕ್ಸ್ ಉದ್ದಿಮೆ ನಡೆಸುವವರಿಗೆ ಹೆಚ್ಚಿನ ಲಾಭ ಸಿಗಲಿದೆ.