ಹಾಸನ: ‘ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ಚಿಹ್ನೆ ಯಾವುದಿರುತ್ತೆ? ತೆನೆ ಹೊತ್ತ ಮಹಿಳೆಯದ್ದೇ ಅಥವಾ ಕಮಲವೇ ಎಂದು ಕೆಲವರು ಕೇಳಿದ್ದರು. ಯಾರಿಗೂ ಅನುಮಾನ, ಗೊಂದಲ ಬೇಡ. ಅಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯೇ ಇರುತ್ತದೆ. ಆ ಮಹಿಳೆ ಹೆಸರು ಕಮಲ’ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಚನ್ನರಾಯಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೊಂದಲ ಬಗೆಹರಿಸಲು ನಿನ್ನೆಯಿಂದ ಒಂದು ತಂತ್ರ ಮಾಡಿದ್ದೇವೆ. ತೆನೆ ಹೊತ್ತ ಮಹಿಳೆ ನಮ್ಮ ಚಿಹ್ನೆ. ತೆನೆ ಹೊತ್ತ ಮಹಿಳೆಗೆ ಕಮಲ ಎಂದು ನಾಮಕರಣ ಮಾಡಿದ್ದೇವೆ’ ಎಂದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ‘ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ. ಕೆಲಸದಲ್ಲಿ ನಮಗೆ ಯಾರೂ ಸಾಟಿಯಿಲ್ಲ. ಅವರು ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಮಾತೆತ್ತಿದರೆ ರೇವಣ್ಣ ದುರಹಂಕಾರಿ ಎನ್ನುತ್ತಾರೆ. ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಆದರೆ ಅವರ ಹೃದಯದಲ್ಲಿ ಪ್ರೀತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.