ಬೆಳಗಾವಿ: ‘ನನ್ನ ಮೈಯಲ್ಲಿ ಹರಿಯುತ್ತಿರುವುದು ರಾಣಿ ಚನ್ನಮ್ಮನ ರಕ್ತ. ನನ್ನ ಮಗನಲ್ಲಿ ಮೈಯಲ್ಲಿ ಹರಿಯುತ್ತಿರುವುದೂ ಚನ್ನಮ್ಮನ ರಕ್ತವೇ. ಲಕ್ಷ್ಮಿ ಹೆಬ್ಬಾಳಕರ ಪಂಚಮಸಾಲಿ ಸಮುದಾಯದವರಲ್ಲ ‘ಬಣಜಿಗ’ ಎಂದು ಮುರುಗೇಶ ನಿರಾಣಿ ಹೇಳಿಕೆ ನೀಡಿದ್ದಾರೆ. ಅವರಿಗೆ ಬುದ್ಧಿಭ್ರಮಣೆ ಆಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು.

‘ನಾವು ಬಸವಣ್ಣನ ತತ್ವ ನಂಬಿದವರು. ಅಂಬೇಡ್ಕರ್ ಸಂವಿಧಾನ ಒಪ್ಪಿಕೊಂಡವರು’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯುವ ಹೋರಾಟದಲ್ಲಿ ನಾನು, ನನ್ನ ಮಗ ಮುಂಚೂಣಿಯಲ್ಲಿದ್ದೆವು. ನಮ್ಮ ಇಡೀ ಕುಟುಂಬ ಹೋರಾಟ ಮಾಡಿದೆ. ಬಹುಶಃ ನಿರಾಣಿ ಅಣ್ಣನವರಿಗೆ ಇದರಿಂದ ಎಲ್ಲೋ ಒಂದುಕಡೆ ನಿರಾಸೆಯಾಗುತ್ತಿದೆ’ ಎಂದು ಟೀಕಿಸಿದರು.

‘ಮೃಣಾಲ್ ಹೆಬ್ಬಾಳಕರ ಮತ್ತು ಪ್ರಿಯಾಂಕಾ ಜಾರಕಿಹೊಳಿ ಚಿಕ್ಕವರು’ ಎಂಬ ವಿರೋಧ ಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಶದ ಭದ್ರತೆಗಾಗಿ ನಾವು 16ನೇ ವಯಸ್ಸಿಗೆ ಸಂದರ್ಶನ ಮಾಡಿ, ಯುವಕರನ್ನು ಸೇನೆಗೆ ಕಳುಹಿಸುತ್ತೇವೆ. 18ನೇ ವಯಸ್ಸಿಗೆ ಮತದಾನ ಮಾಡುವ ಹಕ್ಕು ಕೊಟ್ಟಿದ್ದೇವೆ. ಹೀಗಿರುವಾಗ 31 ವರ್ಷದ ಮೃಣಾಲ್ ಮತ್ತು 27 ವರ್ಷದ ಪ್ರಿಯಾಂಕಾ ಅವರನ್ನು ಚಿಕ್ಕವರು ಎನ್ನುವುದು ಯಾವ ಲೆಕ್ಕಾಚಾರ’ ಎಂದು ಮರುಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.