ಬೆಂಗಳೂರು (ಪಿಟಿಐ): ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇಕಡಾ 65 ರಷ್ಟು ಮತದಾನವಾಗಿದೆ.

ಕೇಂದ್ರೀಯ ಭದ್ರತಾ ಪಡೆ ಸೇರಿದಂತೆ 85 ಸಾವಿರ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ನಡೆದ ಮತದಾನ ಚಿಕ್ಕ ಪುಟ್ಟ ಅಹಿತಕರ ಘಟನೆ ಹೊರತು ಪಡಿಸಿ ಬಹುತೇಕ ಶಾಂತವಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಮಧ್ಯಾಹ್ನದ ವೇಳೆಗೆ ಶೇಕಡಾ 25 ರಷ್ಟಿದ್ದ ಮತದಾನ ಮೂರು ಗಂಟೆಯ ವೇಳೆ ಶೇಕಡಾ 47 ರಷ್ಟಾಗಿತ್ತು. ಸಂಜೆ ಐದು ಗಂಟೆಯ ವೇಳೆಗೆ ಶೇಕಡಾ 60ರಷ್ಟು ಮತದಾನವಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

28 ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಒಟ್ಟು 435 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆ ಸೇರಿದ್ದು, ಮೇ 16 ರಂದು ಮತ ಏಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.