ಅಹಮದಾಬಾದ್: ಮೋದಿ ಅವರ ಜೀವನ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಸಿನಿಮಾದ ವಿಶೇಷ ಪ್ರದರ್ಶನವನ್ನು ಇಲ್ಲಿನ ಪಿವಿಆರ್ ಅಕ್ರೊಪಾಲಿಸ್ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾಣಿ ಸಿನಿಮಾ ನೋಡಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಈ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದರು. ಆದರೆ, ಚುನಾವಣಾ ಆಯೋಗ ಮತ್ತು ನ್ಯಾಯಾಲಯ ಈ ಪ್ರಯತ್ನಕ್ಕೆ ತಡೆ ಒಡ್ಡಿದ್ದವು. ಹಾಗಾಗಿ ಚುನಾವಣೆ ಪೂರ್ಣಗೊಳ್ಳುವವರೆಗೆ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೇ 24ರಂದು ಸಿನಿಮಾ ಬಿಡುಗಡೆ ಆಗಲಿದೆ.ಒಮಂಗ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶಕ. ಹಿಂದಿ ನಟ ವಿವೇಕ್ ಒಬೆರಾಯ್ ಅವರು ಮೋದಿ ಪಾತ್ರ ನಿರ್ವಹಿಸಿದ್ದಾರೆ.

ಮೋದಿ ಮತ್ತು ಎನ್ಡಿಎಗೆ ಈ ಚುನಾವಣೆಯಲ್ಲಿ ಗೆಲುವು ದೊರೆಯಲಿದೆ. ತಮ್ಮ ಸಿನಿಮಾ ನೋಡುವ ಮೂಲಕ ಚುನಾವಣಾ ವಿಜಯೋತ್ಸವ ಆಚರಿಸಿ ಎಂದು ಒಬೆರಾಯ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.