ಕಿರಣ್ ರಾಜ್ ಕೆ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಿರ್ದೇಶಕ. 777 ಚಾರ್ಲಿ ಚಿತ್ರವನ್ನು ನಿರ್ದೇಶಿದ್ದ ಕಿರಣ್ ರಾಜ್ ಅವರು ಅದು ವಿಶ್ವದಾದ್ಯಂತ ಎಲ್ಲರಿಂದ ಅತಿ ಹೆಚ್ಚು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ಅದರಲ್ಲೂ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ಅವರಿಗೆ ಯಶಸ್ಸು ತಂದುಕೊಟ್ಟಿದ್ದು ಕಿರಣ್ ರಾಜ್ ಅವರ ಮೇಲೆ ಸಹಜವಾಗಿಯೇ ಜವಾಬ್ದಾರಿ ಹೆಚ್ಚಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅವರು ಆ್ಯಕ್ಟರ್ ಆಗಬೇಕು ಎಂದು ಕಾಲಿಟ್ಟವರು ಆದರೆ ಅವಕಾಶಗಳು ಸಿಗದಿದ್ದಾಗ, ತಮ್ಮ ಜೇವನದಲ್ಲಿ ಆದಂತಹ ಘಟನೆಗಳನ್ನು ಅವರು ಯಾಕೆ ಕತೆಯಾಗಿ ಹೇಳಬಾರದು ಎಂದು ಆಲೋಚಿಸಿ ನಿರ್ದೇಶನಕ್ಕೆ ಬಂದವರು ಕಿರಣ್ ರಾಜ್. ನೂರಾರು ಕತೆಗಳು ಈಗ ಅವರಲ್ಲಿವೆ ಹಾಗಾಗಿ ಅವರಿಗೆ ನಿರ್ದೇಶನ ಮಾಡುವುದಕ್ಕೆ ಕತೆಯ ಹುಡುಕಾಟದ ಅವಶ್ಯಕತೆ ಇಲ್ಲ ಎಂದು ಹೇಳಿದ್ದು, ತುಂಬಾ ಒಳ್ಳೆಯ ಚಿತ್ರಗಳನ್ನು ನೀಡುವ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.