69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾವು ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ತೆರೆಕಾಣಲಿದೆ.

ಪರಂವಃ ಸ್ಟುಡಿಯೊಸ್ ನಿರ್ಮಾಣದ ಈ ಚಿತ್ರವನ್ನು ಕಿರಣ್ರಾಜ್ ಕೆ. ನಿರ್ದೇಶಿಸಿದ್ದಾರೆ. ಜೂನ್ 28ರಂದು ಸಿನಿಮಾ ಜಪಾನ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಜಪಾನಿನ ಅತೀ ದೊಡ್ಡ ಹಾಗೂ ಜಪಾನ್ ಚಿತ್ರರಂಗದಲ್ಲಿ 100 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ‘ಶೋಚಿಕೋ ಮೂವೀ’ ಎಂಬ ಸಂಸ್ಥೆ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲಿದೆ. ವಿಶೇಷವೇನೆಂದರೆ ಇದೇ ಸಂಸ್ಥೆಯು ಈ ಹಿಂದೆ ಹಾಲಿವುಡ್ನ ಹಿಟ್ ಸಿನಿಮಾ ‘ಹಾಚಿ: ಎ ಡಾಗ್ಸ್ ಟೇಲ್’ ಅನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು.

ಕಳೆದ ವರ್ಷ ಥಾಯ್ಲೆಂಡ್ನಲ್ಲಿ ಡಬ್ ಆಗಿ ಬಿಡುಗಡೆಗೊಂಡ ಈ ಚಿತ್ರ, ಮುಂದಿನ ದಿನಗಳಲ್ಲಿ ಜಪಾನ್ ಸೇರಿದಂತೆ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಆಯಾ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.