ಚೆನ್ನೈ: ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ತಾವು ಮಾಡಿದ್ದ ‘ಅಸಭ್ಯ ಹಾಸ್ಯ’ದ ಟ್ವೀಟ್‌ಗಾಗಿ ನಟ ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕ್ಷಮೆಯಾಚನೆಯ ಪತ್ರದಲ್ಲಿ, ‘ಡಿಯರ್ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಮಾಡಿದ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ನಿಮ್ಮ ಟ್ವೀಟ್‌ಗೆ ನಾನು ಪ್ರತಿಕ್ರಿಯಿಸಿದ ರೀತಿ ಸಮರ್ಥನೀಯವಲ್ಲ’ಎಂದಿದ್ದಾರೆ.

‘ನನ್ನ ಟ್ವೀಟ್‌ನ ಉದ್ದೇಶ ಹಾಸ್ಯವಾಗಿತ್ತೇ ಹೊರತು ಅನೇಕರು ಆರೋಪಿಸುತ್ತಿರುವ ರೀತಿಯಲ್ಲಿ ಯಾವುದೇ ದುರುದ್ದೇಶಪೂರಿತ ಉದ್ದೇಶವಿರಲಿಲ್ಲ. ನಾನು ಕಟ್ಟಾ ಸ್ತ್ರೀವಾದಿ ಮಿತ್ರ ಮತ್ತು ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗವನ್ನು ಉದ್ದೇಶಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಒಬ್ಬ ಮಹಿಳೆ ಎಂದು ನಿಮ್ಮ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ, ಪ್ರಾಮಾಣಿಕವಾಗಿ, ಸಿದ್ಧಾರ್ಥ್’ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಅಸಭ್ಯ ಹಾಸ್ಯದ ಬಗ್ಗೆ ನೆಟ್ಟಿಗರಿಂದತೀವ್ರವಾಗಿ ಟೀಕೆ ವ್ಯಕ್ತವಾದ ಬಳಿಕ ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಾರೆ.

ಜನವರಿ 5ರಂದು ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ವೇಳೆ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. 'ಯಾವುದೇ ರಾಷ್ಟ್ರವು ತನ್ನ ಪ್ರಧಾನಿಯ ಭದ್ರತೆಗೆ ಧಕ್ಕೆಯಾದರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಪ್ರಬಲವಾದ ಪದಗಳಲ್ಲಿ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ್ ಅಸಭ್ಯ ಹಾಸ್ಯದ ಟ್ವೀಟ್ ಮಾಡಿದ್ದರು.

ಲೈಂಗಿಕ ಅಶ್ಲೀಲತೆಯಿಂದ ಕೂಡಿದೆ ಎಂದು ಅವರ ಟ್ವೀಟ್ ಬಗ್ಗೆ ವ್ಯಾಪಕ ಟೀಕೆಗಳು ಬಂದ ಬಳಿಕ ಸಿದ್ಧಾರ್ಥ್ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡು ಮತ್ತೊಂದು ಪೋಸ್ಟ್ ಮಾಡಿದ್ದಾರೆ. ನನ್ನ ಈ ಹಿಂದಿನ ಟ್ವೀಟ್, ಕಾಕ್ & ಬುಲ್ ಎಂಬ ಮಾತಿಗೆ ಸಂಬಂಧಿಸಿದ್ದಾಗಿದೆ ಎಂದು ಬರೆದಿದ್ದಾರೆ. ಯಾರಿಗೂ ಅಗೌರವ ತೋರುವ ಉದ್ದೇಶವಿರಲಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.