ಚೆನ್ನೈ: ಪಾ. ರಂಜಿತ್ ನಿರ್ದೇಶಸಿರುವ, ನಟ ವಿಕ್ರಮ್ ಅಭಿನಯನದ ತಂಗಲಾನ್ ಚಿತ್ರ ಇದೇ ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್, ‘ಇತಿಹಾಸವು ತನ್ನನ್ನು ರಕ್ತ ಹಾಗೂ ಸುವರ್ಣಾಕ್ಷರಗಳಲ್ಲಿ ಬರೆಯಲು ಕಾತುರವಾಗಿದೆ’ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.

19ನೇ ಶತಮಾನ ಬ್ರಿಟಿಷ್ ಆಳ್ವಿಕೆ ಕಾಲದ ಕಥೆಯಾಗಿದ್ದು, ಕರ್ನಾಟಕದ ಕೋಲಾರದಲ್ಲಿನ ಪೂರ್ವಕುಡಿ ಸಮುದಾಯ ಬಗೆಗಿನ ಚಿತ್ರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳಿನ ಹಿಂದುಳಿದ ಸಮುದಾಯದ ನಾಯಕನಾಗಿ ವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಪಾರ್ವತಿ, ಮಾಳವಿಕಾ ಮೋಹನ್ ಹಾಗೂ ಹಾಲಿವುಡ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ನಟಿಸಿದ್ದಾರೆ. ಈ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಜಿ.ವಿ. ಪ್ರಕಾಶ್ ಸಂಗೀತ ಚಿತ್ರಕ್ಕಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ನಿರ್ಮಾಣ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.