ಬಾಲಿವುಡ್ ನಟಿ ಸೋನಮ್ ಕಪೂರ್ ಮಾವ ಹರೀಶ್ ಅಹುಜಾ ಅವರಿಗೆ ಸೇರಿದ ಆಮದು-ರಫ್ತುಕಂಪೆನಿಗೆ ಸೈಬರ್ ವಂಚನೆ ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಸುಮಾರು ₹ 27 ಕೋಟಿ ವಂಚನೆ ಮಾಡಿರುವಆರೋಪಿಗಳಾದದೆಹಲಿಯ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್, ಲಲಿತ್ ಕುಮಾರ್ ಜೈನ್, ಮನೀಶ್ ಕುಮಾರ್ ಮೊಗಾ, ಮುಂಬೈನ ಭೂಷಣ್ ಕಿಶನ್ ಠಾಕೂರ್, ಚೆನ್ನೈನ ಸುರೇಶ್ ಕುಮಾರ್ ಜೈನ್, ರಾಯಚೂರಿನ ಗಣೇಶ್ ಪರಶುರಾಮ್, ರಾಯಗಢದ ರಾಹುಲ್ ರಘುನಾಥ್ ಮತ್ತು ಪುಣೆಯ ಸಂತೋಷ್ ಸೀತಾರಾಮ್ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..

ಸೋನಮ್ ಕಪೂರ್ ಪತಿ ಆನಂದ್ ಅಹುಜಾ ಅವರ ತಂದೆ ಹರೀಶ್ ಅಹುಜಾಅವರು ಫರೀದಾಬಾದ್ ಮೂಲದ ಸಂಸ್ಥೆಯೊಂದರಲ್ಲಿ ವ್ಯವಹಾರ ನಡೆಸಿ ವಂಚನೆಗೆ ಒಳಗಾಗಿದ್ದಾರೆ. ಹರೀಶ್ ಅಹುಜಾಅವರ ನಕಲಿ ಡಿಜಿಟಲ್ ಸಹಿ ಮತ್ತು ನಕಲಿ ಪ್ರಮಾಣಪತ್ರಗಳನ್ನು ಬಳಸಿ ಸೈಬರ್ ವಂಚನೆ ಮಾಡಲಾಗಿದೆಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಮೇ 6ಕ್ಕೆ ಶರಣ್ ನಟನೆಯ ‘ಅವತಾರ ಪುರುಷ’ ಬಿಡುಗಡೆ

ಈ ಬಗ್ಗೆ ಹರೀಶ್ ಅಹುಜಾ ಅವರು ಕಳೆದ ವರ್ಷ ಜುಲೈನಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಫರೀದಾಬಾದ್ ಪೊಲೀಸರು ಕರ್ನಾಟಕ, ದೆಹಲಿ, ಮುಂಬೈ, ಚೆನ್ನೈ ನಗರಗಳಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹೀಗಿದೆ ನೋಡಿ ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಶೀರ್ಷಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.